ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಂತಿಮ ಗಮ್ಯತಲುಪಿದ ಚಂದ್ರಯಾನ-1
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತಿಮ ಗಮ್ಯತಲುಪಿದ ಚಂದ್ರಯಾನ-1
ಹಲವು ಸಂಕೀರ್ಣ ಕಾರ್ಯಾಚರಣೆಯ ಬಳಿಕ ಇಸ್ರೋ ವಿಜ್ಞಾನಿಗಳು ಚಂದ್ರಯಾನ-1 ಉಪಗ್ರಹವನ್ನು, ಉದ್ದೇಶಿತ ಗುರಿಯಾಗಿರುವ ಚಂದ್ರನ ಅಂತಿಮ ಕಕ್ಷೆಗೆ ಬುಧವಾರ ಸೇರಿಸಿದ್ದಾರೆ.

WD
ಬುಧವಾರ ಸಂಜೆ 6.30ರ ಸುಮಾರಿಗೆ ಒಂದು ನಿಮಿಷದ ಕಾಲ ಲ್ಯಾಮ್ ರಾಕೆಟನ್ನು ಉರಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ವ್ಯೋಮನೌಕೆಯು ಚಂದ್ರನಿಂದ 100 ಮೀಟರ್ ದೂರದ ಕಕ್ಷೆಯಲ್ಲಿ ಅಂಡಾಕಾರದಲ್ಲಿ ಸುತ್ತುತ್ತಿದೆ.

ಈ ಉಪಗ್ರಹವು ಎರಡು ವರ್ಷಗಳ ಕಾಲ ಚಂದ್ರನ ಕಕ್ಷೆಯಲ್ಲಿ ಎರಡು ಗಂಟೆಗೊಮ್ಮೆ ಚಂದ್ರನಿಗೆ ಸುತ್ತುಹಾಕಲಿದೆ. ಅಕ್ಟೋಬರ್ 22ರಂದು ಶ್ರೀಹರಿಕೋಟದಿಂದ ಹಾರಿಬಿಡಲಾದ ಈ ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸಲು 440 ನ್ಯೂಟನ್ ಎಂಜಿನನ್ನು ಒಟ್ಟು 10 ಬಾರಿ ಚಾಲನೆಗೊಳಿಸಲಾಗಿತ್ತು. ಇದೀಗ ಬುಧವಾರ ಉಪಗ್ರಹವು ತನ್ನ ಅಂತಿಮ ಗಮ್ಯವನ್ನು ಸೇರಿದೆ.

ಮುಂದಿನ ಮಹತ್ವದ ಘಟ್ಟವಾಗಿರುವ ಮೂನ್ ಇಂಪ್ಯಾಕ್ಟ್ ಪ್ರೋಬ್ ಅನ್ನು ಚಂದ್ರನ ಮೇಲೆ ಇಳಿಸುವ ಕಾರ್ಯವನ್ನು ಇನ್ನು ಒಂದೆರಡು ದಿನಗಳಲ್ಲಿ ಮಾಡಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದರಲ್ಲಿ ತ್ರಿವರ್ಣಧ್ವಜ ಇದೆ.

ಗಗನ ನೌಕೆಯು 1,380 ಕಿಲೋ ತೂಗುವ 11 ಪೇಲೋಡ್‌ಗಳನ್ನು (ವೈಜ್ಞಾನಿಕ ಉಪಕರಣಗಳನ್ನು) ಹೊತ್ತೊಯ್ದಿದೆ.

ಚಂದ್ರನ ಅಧ್ಯಯನದ ಉದ್ದೇಶವಿರುವ ಈ ಚಂದ್ರಯಾನದ ವೆಚ್ಚ ಸುಮಾರು 386 ಕೋಟಿ ರೂ. ಸೂಕ್ತ ವಿದ್ಯುಚ್ಛಕ್ತಿ ಒದಗಿಸುವ ನಿಟ್ಟಿನಲ್ಲಿ ಈ ಗಗನ ನೌಕೆಯಲ್ಲಿ ಸೌರಶಕ್ತಿಯ ಪ್ಯಾನೆಲ್ ಇದೆ. ಗರಿಷ್ಠ 700 ವ್ಯಾಟ್ ವಿದ್ಯುತ್ತನ್ನು ಇದು ಒದಗಿಸುತ್ತದೆ. ಸೂರ್ಯನಿಂದ ಸಾಕಷ್ಟು ಬೆಳಕು ಲಭ್ಯವಾಗದಿದ್ದರೆ ಸಹಾಯವಾಗುವಂತೆ 36 ಆಂಪಿಯರ್-ಅವರ್ (Ah) ಲೀಥಿಯಮ್ ಅಯಾನ್ ಬ್ಯಾಟರಿಯನ್ನೂ ಇದರಲ್ಲಿ ಅಳವಡಿಸಲಾಗಿದೆ.

ಈ ನೌಕೆಯಲ್ಲಿರುವ ಅವಳಿ ಆಂಟೆನಾಗಳು 11 ಪೇ ಲೋಡ್‌ಗಳ ಮೂಲಕ ಸಂಗ್ರಹಿಸಿ ರೇಡಿಯೋ ತರಂಗಗಳ ಮೂಲಕ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡುತ್ತವೆ. ಬೆಂಗಳೂರಿನ ಸಮೀಪವಿರುವ ಬ್ಯಾಲಾಳು ಎಂಬ ತಾಣದಲ್ಲಿ 18 ಹಾಗೂ 32 ಮೀಟರ್ ವ್ಯಾಸವಿರುವ ಎರಡು ಆಂಟೆನಾಗಳನ್ನು ಸ್ಥಾಪಿಸಲಾಗಿದ್ದು, ಅಂತರಿಕ್ಷದಿಂದ ಬರುವ ರೇಡಿಯೋ ತರಂಗಗಳನ್ನು ಸಂಸ್ಕರಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
ಪರಸ್ಪರರ ಸಾವಿಗೆ ಕಾದಿದ್ದ ಮೊರಾರ್ಜಿ, ಚರಣ್ ಸಿಂಗ್!
ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
ಗುಜರಾತ್ ಮಸೂದೆಗೆ ಸಹಿ ಹಾಕದಿರಲು ರಾಷ್ಟ್ರಪತಿಗೆ ಸಲಹೆ?
ಸಿಂಗೂರು ಕೊಲೆ: ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ
ಚಂಡೀಪುರದಲ್ಲಿ ಯಶಸ್ವೀ ಕ್ಷಿಪಣಿ ಪರೀಕ್ಷೆ