" ರಜನಿಕಾಂತ್ ರಾಜಕೀಯಕ್ಕಿಳಿಯಬೇಕು" ಎಂದು ತೆಲುಗು ಸೂಪರ್‌ಸ್ಟಾರ್ ನೀಡಿದ ಕರೆಗೆ ರಜನಿ ಓಗೊಡುತ್ತಿದ್ದಾರಾ? ಇತ್ತೀಚಿನ ವಿದ್ಯಮಾನಗಳು ಇದಕ್ಕೆ ಹೌದೆನ್ನುವ ಸೂಚನೆ ನೀಡುತ್ತಿವೆ.ಬುಧವಾರ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಚೆನ್ನೈಯಲ್ಲಿರುವ ರಜನಿಕಾಂತ್ ನಿವಾಸಕ್ಕೆ ಭೇಟಿನೀಡಿರುವುದು ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಇದಕ್ಕೆಲ್ಲ ತುಪ್ಪ ಸುರಿಯುವಂತೆ ರಜನಿ ಅವರೂ, ಅಭಿಮಾನಿಗಳು ಬಯಸಿದಲ್ಲಿ ರಾಜಕೀಯಕ್ಕೆ ಸೇರಲು ಸಿದ್ಧ ಎಂದು ಹೇಳಿದ್ದಾರೆ. ಆಡ್ವಾಣಿ ಅವರು ಸೂಪರ್ ಸ್ಟಾರ್ ಜತೆಗೆ ಸುಮಾರು ಅರ್ಧಗಂಟೆಗಳ ಕಾಲ ನಿಕಟವಾಗಿ ಮಾತುಕತೆ ನಡೆಸಿದರು. ಬಳಿಕ, ನಾರದ ಗಾನ ಸಭಾದಲ್ಲಿ ನಡೆದ ಆಡ್ವಾಣಿ ಅವರ ಆತ್ಮಚರಿತ್ರೆ 'ನನ್ನದೇಶ, ನನ್ನ ಬದುಕು' ತಮಿಳು ಆವೃತ್ತಿಯ ಬಿಡುಗಡೆ ಸಮಾರಂಭದಲ್ಲೂ ರಜನಿ ಪಾಲ್ಗೊಂಡರು.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಆಡ್ವಾಣಿ ರಜನಿಯವರಿಗೆ ಆಹ್ವಾನ ನೀಡಿದ್ದಾರೆನ್ನಲಾಗಿದೆ.ಈ ಮಧ್ಯೆ, ಇನ್ನೊಬ್ಬ ಬಿಜೆಪಿ ನಾಯಕ ಶತ್ರುಘ್ನ ಸಿನ್ಙಾ ಅವರೂ ರಜನಿ ಅಭಿಮಾನಿಗಳಿಗೆ ದೊಡ್ಡ ಆಚ್ಚರಿ ಕಾದಿದೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಇದ್ಯಾವುದಕ್ಕೂ ರಜನಿ ದೃಢವಾದ ಉತ್ತರ ನೀಡಿಲ್ಲ. ಅವರಿಗೆ ಎಸೆಯಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅಂತದ್ದೇನಿಲ್ಲ ಎಂದು ಹೇಳಿದ್ದಾರೆ." ರಜನಿ ತನ್ನ ನಿವಾಸಕ್ಕೆ ತನಗೆ ಬಹಳ ಸಮಯದಿಂದಲೇ ಆಹ್ವಾನ ನೀಡುತ್ತಲೇ ಇದ್ದರು. ಇಂದು ಅವರ ಅಹ್ವಾನವನ್ನು ಪರಿಗಣಿಸಿ ಅವರ ನಿವಾಸಕ್ಕೆ ತಾನು ತೆರಳಿದ್ದು ಅವರ ಇಚ್ಛೆಯನ್ನು ಪೂರೈಸಿದೆ" ಎಂದು ಆಡ್ವಾಣಿ ಹೇಳಿದ್ದಾರೆ.ಆಡ್ವಾಣಿ ಅವರ ಒಲವು ಬಿಜೆಪಿಯತ್ತ ಎಂಬುದು ಇದೀಗಾಗಲೇ ತಿಳಿದಿರುವ ವಿಚಾರ. 2004ರ ಲೋಕಸಭಾ ಚುನಾವಣೆ ವೇಳೆಗೆ ಅವರು ತನ್ನ ವೋಟು ಬಿಜೆಪಿಗೆಎಂದಿದ್ದರು. |