ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಣ್ಣೂರಿನಲ್ಲಿ 125 ಕಚ್ಚಾ ಬಾಂಬುಗಳು ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಣ್ಣೂರಿನಲ್ಲಿ 125 ಕಚ್ಚಾ ಬಾಂಬುಗಳು ಪತ್ತೆ
ಇಲ್ಲಿಂದ ಸುಮಾರು 45 ಕಿ.ಮೀ ದೂರದ ಖಾಲಿ ನಿವೇಶನ ಒಂದರಲ್ಲಿ 125 ಶಕ್ತಿಶಾಲಿ ಕಚ್ಚಾ ಬಾಂಬುಗಳನ್ನು ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ.

ರಾಜಕೀಯ ಸೂಕ್ಷ್ಮ ಜಿಲ್ಲೆಯಲ್ಲಿ ಪತ್ತೆಯಾಗಿರುವ ಬಾಂಬನ್ನು ಗೋಣಿ ಚೀಲದಲ್ಲಿ ತುಂಬಿ ಪೊದೆಯಲ್ಲಿ ಆಡಗಿಸಿಡಲಾಗಿತ್ತು.

ಕೊಲವಲ್ಲೂರ್‌ ಪೊಲೀಸ್ ವ್ಯಾಪ್ತಿಯ ಮಲಿಯಾದ್ ಕುನ್ನು ಎಂಬಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಈ ಬಾಂಬುಗಳು ಪತ್ತೆಯಾಗಿವೆ. ತಲಚ್ಚೇರಿ ಡಿವೈಎಸ್‌ಪಿ ಪ್ರಕಾಶನ್ ಅವರು ಪೊಲೀಸ್ ತಂಡದ ನೇತೃತ್ವ ವಹಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಚೆರುವಂಚೇರಿ ಸಮೀಪದಲ್ಲಿ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರು ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿರುವ ಬಳಿಕ ಪೊಲೀಸರು ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಈ ಇಬ್ಬರು ನವೆಂಬರ್ 10ರಂದು ಸಾವನ್ನಪ್ಪಿದ್ದು, ಅವರು ಬಾಂಬು ತಯಾರಿಸುತ್ತಿದ್ದ ವೇಳೆ, ಇಲ್ಲವೇ ಬಾಂಬ್‌ಗಳನ್ನು ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿರಬೇಕು ಎಂದು ಸಂಶಯಿಸಲಾಗಿದೆ.

ಆರೆಸ್ಸೆಸ್ ಕಾರ್ಯಕರ್ತರು ಸಾವನ್ನಪ್ಪಿದ ಬಳಿಕ ಸ್ಫೋಟಸ್ಥಳದಿಂದ ಸುಮಾರು 100 ಮೀಟರ್‌ಗಳ ದೂರದಲ್ಲಿ ಪೊಲೀಸರು ಖಾಸಗಿ ನಿವೇಶನ ಒಂದರಲ್ಲಿ 18 ಕಚ್ಚಾ ಬಾಂಬುಗಳನ್ನು ಪತ್ತೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೆನ್ನೈ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ
ಬಂಧಿತ ಮಠಾಧೀಶ ಪಾಂಡೆ ಮುಂಬೈಗೆ
'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?
ಎಟಿಎಸ್ ತನಿಖೆಗೆ ಸಿದ್ಧ: ಸಾಧ್ವಿ ಗುರು
ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
ಚೆನ್ನೈ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಮಾರಾಮಾರಿ