ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ
ನಕ್ಸಲ್ ಬೆದರಿಕೆ-ಎಲ್ಲೆಡೆ ಬಿಗಿ ಬಂದೋಬಸ್ತ್
ನಕ್ಸಲೀಯರ ದಾಳಿ ಬೆದರಿಕೆಯ ನಡುವೆಯೇ ಛತ್ತೀಸ್‌ಗಢ ವಿಧಾನಸಭೆಯ ಪ್ರಥಮ ಹಂತದ ಚುನಾವಣೆಯ ಮತದಾನ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿದ್ದು, ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

ಇಂದು ನಡೆಯುತ್ತಿರುವ ಮೊದಲ ಹಂತದ 39ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟು 379ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಛತ್ತೀಸ್‌ಗಢ ವಿಧಾನಸಭೆ ಒಟ್ಟು 90 ಸೀಟುಗಳನ್ನು ಹೊಂದಿದ್ದು, ಪ್ರಥಮ ಹಂತದಲ್ಲಿ 39 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

39 ಕ್ಷೇತ್ರಗಳಲ್ಲಿ ಬಸ್ತಾರ್‌ನ ಸುಮಾರು 12 ಕ್ಷೇತ್ರ ನಕ್ಸಲೀಯರ ಪ್ರಾಬಲ್ಯ ಹೊಂದಿದೆ. ಅಲ್ಲದೇ ನಕ್ಸಲೀಯರ ಹಾವಳಿ ಇರುವ ಕ್ಷೇತ್ರಗಳ ಮತದಾನ ಸಮಯದಲ್ಲೂ (ಬೆಳಿಗ್ಗೆ 7ರಿಂದ ಮಧ್ನಾಹ್ನ 3) ಬದಲಾವಣೆ ಮಾಡಲಾಗಿದೆ.

ಒಟ್ಟು 64ಲಕ್ಷ ಮತದಾರರು ಇಂದು ಮತದಾನ ಮಾಡಲಿದ್ದು, 39ಕ್ಷೇತ್ರಗಳಲ್ಲಿನ ಚುನಾವಣೆಗಾಗಿ 8,883 ಮತಗಟ್ಟೆಗಳಿದ್ದು, ವಿದ್ಯುನ್ಮಾನ ಯಂತ್ರಗಳಿಂದ ಮತ ಚಲಾಯಿಸಲಿದ್ದಾರೆ.

ಮುಖ್ಯಮಂತ್ರಿ ರಾಮಣ್ ಸಿಂಗ್, ವಿರೋಧ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ಕಾರ್ಮಾ, ಅಸೆಂಬ್ಲಿ ಸ್ಪೀಕರ್ ಪ್ರೇಮ್ ಪ್ರಕಾಶ್ ಪಾಂಡೆ ಸೇರಿದಂತೆ 379 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

2003ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 50 ಸೀಟುಗಳಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು, ಕಾಂಗ್ರೆಸ್ 37 ಸ್ಥಾನದೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಗಿತ್ತು.

ಈ ಬಾರಿಯ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಅಧಿಕಾರದ ಗದ್ದುಗೆಗೆ ಯಾರು ಏರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು
ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
ಕಣ್ಣೂರಿನಲ್ಲಿ 125 ಕಚ್ಚಾ ಬಾಂಬುಗಳು ಪತ್ತೆ
ಚೆನ್ನೈ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ
ಬಂಧಿತ ಮಠಾಧೀಶ ಪಾಂಡೆ ಮುಂಬೈಗೆ
'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?