ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಕಾಂಗ್ರೆಸ್ ಟಿಕೆಟ್ ಮಾರಾಟ ವಿವಾದವು ಮಾರ್ಗರೆಟ್ ಆಳ್ವ ರಾಜೀನಾಮೆಯೊಂದಿಗೆ ತಣ್ಣಗಾಯಿತು ಎಂಬಂತಿಲ್ಲ. ಆಳ್ವ ಹೇಳಿಕೆಗೆ ಸ್ವರಸೇರಿಸಿದ್ದ ಹಿರಿಯ ನಾಯಕ ಯೋಗೇಂದ್ರ ಮಕ್ವಾನ ಅವರಿಗೂ ಕಾಂಗ್ರೆಸ್ ಗೇಟ್‌ಪಾಸ್ ನೀಡಿದೆ.

ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥರಾಗಿದ್ದ ಮಕ್ವಾನ ಅವರು ಸಾರ್ವಜನಿಕವಾಗಿ ಪಕ್ಷದ ಕಾರ್ಯಚರಣೆ ನೀತಿಗಳ ವಿರುದ್ಧ ಹೇಳಿಕೆ ನೀಡಿರುವುದು ಅವರಿಗೆ ಮುಳುವಾಗಿದೆ. ಗುರುವಾರ ಅವರನ್ನು ಪಕ್ಷ ವಜಾಮಾಡಿದೆ.

"ಮಕ್ವಾನ ಅವರು ಪಕ್ಷದ ನೀತಿಗಳನ್ನು ಸುದೀರ್ಘ ಸಮಯದಿಂದ ಟೀಕಿಸುತ್ತಿದ್ದು ಇದು, ಸ್ಪಷ್ಪವಾದ ಅಶಿಸ್ತಾಗಿದೆ. ಪಕ್ಷಾಧ್ಯಕ್ಷರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದುಳಿದ ಇಲಾಖೆಯ ಅಧ್ಯಕ್ಷತೆಯಿಂದ ವಜಾಗೊಳಿಸಿದ್ದಾರೆ" ಎಂದು ಪಕ್ಷದ ಅಧಿಕೃತ ಹೇಳಿಕೆ ತಿಳಿಸಿದೆ.

ರಾಜಸ್ಥಾನದ ಅಳ್ವಾರ್ ಕ್ಷೇತ್ರವು 2.5 ಕೋಟಿ ರೂಪಾಯಿಗೆ ಮಾರಾಟವಾಗಿದೆ, ಅಂತೆಯೇ ಬರನ್ ಅತ್ರು ಸ್ಥಾನವೂ ಮಾರಟವಾಗಿದೆ ಎಂದು ಮಕ್ವಾನ ಹೇಳಿದ್ದರು.

ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಏನೇ ಹೇಳಲಿ, ಅವರಿಗೆ ಪರಿಶಿಷ್ಟ ಜಾತಿಯ ನೈಜ ನಾಯಕರು ಬೇಕಿಲ್ಲ. ಅವರಿಗೆ ಕೈಗೊಂಬೆಗಳು ಬೇಕಿವೆ ಎಂದು ಮಕ್ವಾನ್ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈ ಸ್ವಾಮಿ ವೇಷ ಮರೆಸುವಲ್ಲಿ ನಿಸ್ಸೀಮ: ಎಟಿಎಸ್
ಛತ್ತೀಸ್‌ಗಢ: ನಕ್ಸಲ್‌‌ರಿಂದ ಮತಯಂತ್ರ ಅಪಹರಣ
ಇಂದು ರಾತ್ರಿ 8.30ಕ್ಕೆ ಚಂದ್ರನ ಮೇಲಿಳಿಯಲಿರುವ ತ್ರಿವರ್ಣ
ಸಂಜೋತ ರೈಲು ಸ್ಫೋಟದಲ್ಲಿ ಸಾಧ್ವಿ ಕೈವಾಡ ತನಿಖೆ
ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ
ಬಂಧಿತ ಗುರು ಪಾಂಡೆಗೆ ಉನ್ನತ ಸಂಪರ್ಕಗಳು