ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಛತ್ತೀಸ್‌ಗಢ: ಶೇ.53ರಷ್ಟು ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ: ಶೇ.53ರಷ್ಟು ಮತದಾನ
ಛತ್ತೀಸ್‌ಗಢದ 39 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮಧ್ನಾಹ್ನದವರೆಗೆ ಶೇ.53ರಷ್ಟು ಮತದಾನವಾಗಿದ್ದು, ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳ ಹಿಂಸಾಚಾರದಿಂದಾಗಿ ಬಹಳಷ್ಟು ಕಡಿಮೆ ಪ್ರಮಾಣದ ಮತದಾನವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಮತದಾನ ಆರಂಭವಾದ ಕೆಲವೇ ಹೊತ್ತಿನಲ್ಲಿ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಬಂಡುಕೋರರು ನಡೆಸಿದ ನೆಲಬಾಂಬ್ ಸ್ಫೋಟದಿಂದಾಗಿ ಮೂರು ಮಂದಿ ಪೊಲೀಸರು ಗಾಯಗೊಂಡಿದ್ದರು.

ನಕ್ಸಲ್ ಪೀಡಿತ ಪ್ರದೇಶದ 12ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭಿಸಲಾಗಿತ್ತು, ಉಳಿದ ಕ್ಷೇತ್ರಗಳಲ್ಲಿ ಬೆಳಿಗ್ಗೆ 8ಗಂಟೆಗೆ ಮತದಾನ ಪ್ರಾರಂಭವಾಗಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿತ್ತು.

ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಕ್ಷೇತ್ರವಾದ ರಾಜಾನಂದಗಾಂವ್‌‌ನಲ್ಲಿ ಬಹುಸಂಖ್ಯೆಯಲ್ಲಿ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ದಾಂತೇವಾಡ ಪ್ರದೇಶದಲ್ಲಿ ಮಾವೋವಾದಿಗಳು ಮತಗಟ್ಟೆಗೆ ದಾಳಿ ನಡೆಸಿ, ಮತಯಂತ್ರಗಳನ್ನು ಅಪಹರಿಸಿಕೊಂಡು ಹೋಗಿದ್ದರು. ಸುಕ್ಮಾ, ಕಿಸ್ತಾರಾಮ್, ಕೊನ್‌ಟಾ, ಭೈರಾಮ್‌ಗರ್, ಅನಂತ್‌ಗರ್, ಪಾಕಾನ್‌ಜೂರ್, ಬಿಜಾರ್‌ಪುರ್ ಮತ್ತು ದಾಂತೇವಾಡ್ ಪ್ರದೇಶಗಳಲ್ಲಿ ಮಾವೋವಾದಿ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಎರಡನೇ ಹಂತದಲ್ಲಿ 51ಕ್ಷೇತ್ರಗಳಿಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಲೆಗಾಂವ್ ಸ್ಫೋಟ ಒಪ್ಪಿಕೊಂಡ ಪುರೋಹಿತ್
ಮಾಜಿ ಕೇಂದ್ರ ಸಚಿವ ಅಜಿತ್ ಪಾಂಜ ಇನ್ನಿಲ್ಲ
ಅವಮಾನ ಸಾವಿಗಿಂತಲೂ ಮಿಗಿಲು: ಸು.ಕೋ
ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಕ್ವಾನ
ಈ ಸ್ವಾಮಿ ವೇಷ ಮರೆಸುವಲ್ಲಿ ನಿಸ್ಸೀಮ: ಎಟಿಎಸ್