ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಲೆಗಾಂವ್: ಪುರೋಹಿತ್‌ಗೆ ಪಾಂಡೆಯಿಂದ ನಿರ್ದೇಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಲೆಗಾಂವ್: ಪುರೋಹಿತ್‌ಗೆ ಪಾಂಡೆಯಿಂದ ನಿರ್ದೇಶನ
ಬಂಧಿತ ಲೆಪ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್‌ರಿಗೆ, ದಯಾನಂದ ಪಾಂಡೆ ಅಲಿಯಾಸ್ ಸುಧಾಕರ ದ್ವೀವೇದಿ ಸ್ಪೋಟಕ ಸಂಗ್ರಹಿಸಲು ನಿರ್ದೇಶನಗಳನ್ನು ನೀಡಿದ್ದರು ಎಂಬುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅಜಯ್ ಮಿಸರ್ ನಾಸಿಕ್ ನ್ಯಾಯಾಲಯಕ್ಕೆ ಶುಕ್ರವಾರದಂದು ತಿಳಿಸಿದ್ದಾರೆ.

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅಂದರೆ ಮಾಲೆಗಾಂವ್ ಸ್ಪೋಟಕ್ಕಿಂತ ಒಂದು ತಿಂಗಳು ಮುಂಚಿತವಾಗಿ ವಾಂಟೆಡ್ ಲಿಸ್ಟ್‌ನಲ್ಲಿರುವ ಅರೋಪಿ ರಾಮ್‌ಜಿ ಮತ್ತು ಪುರೋಹಿತ್ ನಡುವೆ ಪಾಂಡೆ ಭೇಟಿಯನ್ನು ಅಯೋಜಿಸಿದ್ದರು ಎಂದೂ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಸ್ವಘೋಷಿತ ಶಂಕಾರಾಚಾರ್ಯ, ಸ್ವಾಮಿ ಅಮೃತಾನಂದ ದೇವ ತೀರ್ಥ ಮಹಾರಾಜ್‌, ಅಲಿಯಾಸ್ ಪಾಂಡೆ ಅವರನ್ನು ಮಾಲೆಗಾಂವ್ ಸ್ಪೋಟದಲ್ಲಿ ಪಾತ್ರ ವಹಿಸಿದ ಅರೋಪದದ ಮೇಲೆ ಗುರುವಾರ ಕಾನ್‌ಪುರದಿಂದ ಬಂಧಿಸಲಾಗಿತ್ತು.

ಪಾಂಡೆ ತಾವು ಯಾವುದೇ ಪರೀಕ್ಷೆಗೆ ಸಿದ್ಧರಾಗಿರುವುದಾಗಿ ತಿಳಿಸಿದ ನಂತರ ಅವರನ್ನು ಸುಳ್ಳುಪತ್ತೆ ಪರೀಕ್ಷೆ, ಬ್ರೈನ್ ಮ್ಯಾಪಿಂಗ್ ಮತ್ತು ಪೋಲಿಗ್ರಾಫ್ ಟೆಸ್ಟ್‌ಗಳಿಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ.

ತನಿಖೆಯ ಸಂದರ್ಭ ಸ್ಪೋಟಕಗಳ ಸಂಗ್ರಹಣೆಗೆ ಪುರೋಹಿತ್‌ಗೆ ಪಾಂಡೆ ನಿರ್ದೇಶನ ನೀಡಿದ್ದು ತಿಳಿದು ಬಂದಿದೆ ಎಂದು ಮಿಸರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪುರೋಹಿತ್ ಈ ಪ್ರಕರಣದಲ್ಲಿ ಬಂಧಿತನಾದ ಪ್ರಥಮ ಸೇವಾನಿರತ ಮಿಲಿಟರಿ ಅಧಿಕಾರಿ. ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರೂ ಸೇರಿದಂತೆ 10 ಜನರನ್ನು ಬಂಧಿಸಿದೆ.

ಪ್ರಗ್ಯಾ ಮತ್ತು ಇತರ ಅರೋಪಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಪಾಂಡೆ 20 ದಿನಗಳ ಹಿಂದೆಯೇ ಸೂಕ್ಷ್ಮ ಅವಲೋಕನಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಸಹ ಮಾಲೆಗಾವ್ ಸ್ಪೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ದೃಢವಾದ ನಂತರ ನಾವು ಅವರನ್ನು ಕಾನ್‌ಪುರದಿಂದ ಬಂಧಿಸಿದೆವು ಎಂದು ಎಟಿಎಸ್ ಆಧಿಕಾರಿಗಳು ಹೇಳಿದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿಗಳು ಸ್ಪೋಟದಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂಬುದನ್ನು ಐಪಿಎಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಂದ್ರಗ್ರಹದಲ್ಲಿ ಪ್ರತಿಷ್ಠಾಪನೆಗೊಂಡಿತು ತಿರಂಗ
ಛತ್ತೀಸ್‌ಗಢ: ಶೇ.53ರಷ್ಟು ಮತದಾನ
ಮಾಲೆಗಾಂವ್ ಸ್ಫೋಟ ಒಪ್ಪಿಕೊಂಡ ಪುರೋಹಿತ್
ಮಾಜಿ ಕೇಂದ್ರ ಸಚಿವ ಅಜಿತ್ ಪಾಂಜ ಇನ್ನಿಲ್ಲ
ಅವಮಾನ ಸಾವಿಗಿಂತಲೂ ಮಿಗಿಲು: ಸು.ಕೋ
ನೋಯ್ಡದಲ್ಲಿ ಲಘು ಸ್ಫೋಟ: ಮಕ್ಕಳಿಬ್ಬರಿಗೆ ಗಾಯ