ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸೇವಾನಿರತ ಸೇನಾಧಿಕಾರಿ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರನ್ನು ನವೆಂಬರ್ 18ರ ತನಕ ಪೊಲೀಸರ ವಶಕ್ಕೆ ನೀಡಲಾಗಿದೆ.
ಮಾಲೆಗಾಂವ್ ಸ್ಫೋಟದ ರೂವಾರಿ ಪುರೋಹಿತ್, 2007ರ ಸಂಜೋತಾ ರೈಲು ಸ್ಫೋಟಕ್ಕೆ ಬಳಸಲಾದ ಅರ್‌ಡಿಎಕ್ಸ್ ಹೊಂದಿದ್ದಾಗಿ ಸರಕಾರಿ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆಸಲಾಗಿರುವ ನಾರ್ಕೋ ಅನಾಲಿಸ್ ಪರೀಕ್ಷೆಯಲ್ಲಿ ಪುರೋಹಿತ್ ತಾನು ಸ್ಫೋಟದಲ್ಲಿ ಭಾಗಿಯಾಗಿರುವ ಕುರಿತು ತಪ್ಪೊಪ್ಪಿಕೊಂಡಿರುವುದಾಗಿ ವಕೀಲರು ಹೇಳಿದ್ದಾರೆ. |