ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೀಘ್ರವೇ ಲೋಕಸಭಾ ಚುನಾವಣೆ ನಡೆಯಲಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಪ್ರಧಾನಿ ಡಾ.ಮನಮೋಹನ್ ಸಿಂಗ್, ಚುನಾವಣೆ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಹೇಳಿದರು.
ಆರ್ಥಿಕ ಕುಸಿತ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸೇರಿದಂತೆ ಎಲ್ಲ ವಿಷಯವೂ ಮುಕ್ತವಾಗಿದೆ. ಬೆಲೆಗಳಲ್ಲಿನ ಏರಿಳಿಕೆ ಬಗ್ಗೆ ಪ್ರಶ್ನಿಸುವಂತಹದ್ದು ಏನೂ ಇಲ್ಲ ಎಂದು ಅವರು ತಿಳಿಸಿದರು.
ಅದೇ ರೀತಿ ಹಣದುಬ್ಬರ ಕೂಡ ಒಂದಂಕಿಗೆ ತಲುಪಿದ್ದು, ಬಿಕ್ಕಟ್ಟಿನ, ಆತಂಕದ ವಾತಾವರಣ ಒಂದು ಹಂತಕ್ಕೆ ಬಂದಿದ್ದು, ಪರಿಸ್ಥಿತಿ ಅನುಕೂಲವಾಗಿ ಪರಿಣಮಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. |