ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಣಿವೆ ರಾಜ್ಯದ ಮತದಾನಕ್ಕೆ ಕ್ಷಣಗಣನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಣಿವೆ ರಾಜ್ಯದ ಮತದಾನಕ್ಕೆ ಕ್ಷಣಗಣನೆ
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ವಿಧಾನಸಭೆಗೆ ಸೋಮವಾರ ಪ್ರಥಮ ಹಂತದ ಮತದಾನ ನಡೆಯಲಿದೆ.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 10 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭಯೋತ್ಪಾದಕರ ಬೆದರಿಕೆಯ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಯುತ ಮತದಾನಕ್ಕೆ ಚುನಾವಣಾ ಆಯೋಗ ಭಾರೀ ಭದ್ರತೆ ಕೈಗೊಂಡಿದೆ.

ಬಂಡಿಪೋರ, ಪೂಂಜ್, ಲೆನ್ ಮತ್ತು ಕಾರ್ಗಿಲ್ ಜಿಲ್ಲೆಗಳಲ್ಲಿ ಸೋಮವಾರ ಮತದಾನ ನಡೆಯಲಿದೆ, ಭದ್ರೆತೆಗಾಗಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 1056 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಹಿಂದಿಗಿಂತಲೂ ಹೆಚ್ಚಿನ ಭದ್ರೆತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ವಿಧಾನಸಭಾ ಕ್ಷೇತ್ರಗಳಲ್ಲಿ 6ಲಕ್ಷ ಮತದಾರರು ನಾಳೆ ಮತ ಚಲಾಯಿಸಲಿದ್ದಾರೆ. ಮಾಜಿ ಉಪಸಭಾಪತಿ ಮಹಮ್ಮದ್ ಅಕ್ಬರ್ ಲೋನ್, ಮಾಜಿ ಸಚಿವರಾದ ಉಸ್ಮಾನ್ ಮಜಿ, ನವಾಂಗ್, ರಿಜ್‌ಜಿನ್ ಜೋರಾ, ಲೋಕಸಭಾ ಹಾಲಿ ಸದಸ್ಯ ತುಬ್ಸ್ ತಾನ್ ನಿಜಾಮುದ್ದೀನ್ ಭಟ್ ಸೇರಿದಂತೆ 102ಮಂದಿ ಅಖಾಡದಲ್ಲಿದ್ದಾರೆ.

ಜಮ್ಮು ಕಾಶ್ಮೀರದ ವಿಧಾನಸಭೆಗೆ ಒಟ್ಟು 7ಹಂತಗಳ ಮತದಾನ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಅಧಿಕಾರ ಹಿಡಿಯಲು ಭಾರೀ ಪೈಪೋಟಿ ನಡೆಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಶಾಸಕ ಯೋಗಿ ಆತ್ಮಹತ್ಯೆಗೆ ಶರಣು
ಶೀಘ್ರವೇ ಲೋಕಸಭೆ ಚುನಾವಣೆ ಇಲ್ಲ: ಪ್ರಧಾನಿ
ನ.18ರ ತನಕ ಪುರೋಹಿತ್ ಪೊಲೀಸ್ ವಶಕ್ಕೆ
ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
ಲಕ್ನೋ ನ್ಯಾಯಾಲಯದ ಆವರಣದಲ್ಲಿ ಲಘು ಸ್ಫೋಟ
ಹಿಂಬದಿ ಸವಾರನಿಗೆ ವಿಮಾ ಪರಿಹಾರವಿಲ್ಲ: ಸು.ಕೋ