ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ಪ್ರಾರ್ಥನಾ ಮಂದಿರದಾಳಿ: 8 ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಪ್ರಾರ್ಥನಾ ಮಂದಿರದಾಳಿ: 8 ಬಂಧನ
ಮುಂಬೈ ಉಪನಗರ ಭಯೇಂದರ್‌ನಲ್ಲಿ ಪ್ರಾರ್ಥನಾ ಮಂದಿರ ಒಂದರ ಮೇಲೆ ದಾಳಿ ಮಾಡಿರುವ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಈ ಪ್ರಾರ್ಥನಾ ಮಂದಿರದಲ್ಲಿ ಗುಂಪೊಂದು ಬಲವಂತದ ಮತಾಂತರ ಕಾರ್ಯದಲ್ಲಿ ನಿರತವಾಗಿತ್ತು ಎಂಬುದಾಗಿ ಆರೋಪಿಸಿರುವ ಶಿವಸೇನಾ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆನ್ನಲಾಗಿದೆ.

ಚರ್ಚ್ ಆಫ್ ಗಾಡ್ ಎಂಬ ಸಣ್ಣ ಕ್ರಿಶ್ಚಿಯನ್ ಪಂಥದ ಸದಸ್ಯರು ಪ್ರಾರ್ಥನಾ ಕಾರ್ಯ ನಡೆಸುತ್ತಿದ್ದ ವೇಳೆಗೆ ಈ ದಾಳಿ ನಡೆಸಲಾಗಿದೆ. ಪಾಸ್ಟರ್ ಫೆಲಿಕ್ಸ್ ಫರ್ನಾಂಡಿಸ್ ಅವರು ಪ್ರವಚನ ನೀಡುತ್ತಿದ್ದು, ದಾಳಿ ನಡೆಸಿದ ಗುಂಪು ಇವರನ್ನು ಹಿಗ್ಗಾಮುಗ್ಗಾ ಜಗ್ಗಾಡಿದ್ದು, ಅವರು ಪ್ರಜ್ಞೆಕಳಕೊಳ್ಳುವ ತನಕ ಬೀದಿಯಲ್ಲಿ ಎಳೆದಾಡಿದರು ಎಂದು ವರದಿ ತಿಳಿಸಿದೆ.

ಎಂಟು ಮಂದಿ ಬಂಧನ
ದಾಳಿ ನಡೆಸಿರುವ ಶಿವಸೇನೆ ಮತ್ತು ಬಜರಂಗದಳದ ಎಂಟು ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ ಗಲಭೆಯ ಆರೋಪ ಹೊರಿಸಲಾಗಿದೆ. ಮತಾಂತರವನ್ನು ತಡೆಯಲು ದಾಳಿ ನಡೆಸಿರುವುದಾಗಿ ಶಿವಸೇನೆ ಹೇಳಿಕೊಂಡಿದೆ.

ಯಾವುದೇ ತಪ್ಪುಗಳ ವಿರುದ್ಧ ಶಿವಸೇನೆ ತಿರುಗಿಬೀಳಲಿದೆ ಎಂದು ಶಿವಸೇನಾ ಶಾಸಕ ಏಕನಾಥ್ ಶಿಂಧೆ ಹೇಳಿದ್ದಾರೆ.

ಪ್ರಾರ್ಥನಾ ಮಂದಿರವು ಅವಹೇಳನಕಾರಿ ಹಾಗೂ ಉದ್ರೇಕಕಾರಿ ಕರಪತ್ರಗಳನ್ನು ವಿತರಿಸುತ್ತದೆ ಎಂದು ದಾಳಿಕೊರರು ಆರೋಪಿಸಿದ್ದರೆ, ಶಾಂತಿಯುತ ಕರಪತ್ರಗಳನ್ನು ಮಾತ್ರ ವಿತರಿಸಿರುವುದಾಗಿ ಪ್ರಾರ್ಥನಾ ಮಂದಿರವು ಹೇಳಿದೆ.

ಬೆಳಗಿನ ಪ್ರಾರ್ಥನೆ ವೇಳೆಗೆ, ಇಲ್ಲಿ ಮತಾಂತರ ನಡೆಯುತ್ತದೆ ಎಂದ ಖಚಿತ ಮಾಹಿತಿ ಇದ್ದ ಕಾರಣ ದಾಳಿಕೋರರು ಆದೇ ವೇಳೆ ದಾಳಿ ನಡೆಸಿದ್ದಾರೆ ಎಂದು ಥಾಣೆ ಗ್ರಾಮಂತರದ ಡಿವೈಎಸ್ಪಿ ಮೈಥಿಲಿ ಜಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
ಕಣಿವೆ ರಾಜ್ಯದ ಮತದಾನಕ್ಕೆ ಕ್ಷಣಗಣನೆ
ಬಿಜೆಪಿ ಶಾಸಕ ಯೋಗಿ ಆತ್ಮಹತ್ಯೆಗೆ ಶರಣು
ಶೀಘ್ರವೇ ಲೋಕಸಭೆ ಚುನಾವಣೆ ಇಲ್ಲ: ಪ್ರಧಾನಿ
ನ.18ರ ತನಕ ಪುರೋಹಿತ್ ಪೊಲೀಸ್ ವಶಕ್ಕೆ
ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು