ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೇಂದ್ರದಿಂದ ಎಟಿಎಸ್ ದುರ್ಬಳಕೆ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರದಿಂದ ಎಟಿಎಸ್ ದುರ್ಬಳಕೆ: ಬಿಜೆಪಿ
ಚುನಾವಣೆಯ ತಂತ್ರಕ್ಕಾಗಿ ಕೇಂದ್ರದ ಯುಪಿಎ ಸರ್ಕಾರ ಎಟಿಎಸ್ ಅನ್ನು ತನ್ನ ದಾಳವನ್ನಾಗಿ ಮಾಡಿಕೊಂಡು ರಾಜಕೀಯ ಮಾಡಲು ಹೊರಟಿರುವುದಾಗಿ ಭಾರತೀಯ ಜನತಾ ಪಕ್ಷ ಸೋಮವಾರ ಗಂಭೀರವಾಗಿ ಆರೋಪಿಸಿದೆ.

ಸೋಮವಾರ ಬಿಜೆಪಿಯ ವಕ್ತಾರ ವೆಂಕಯ್ಯ ನಾಯ್ಡು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಯುಪಿಎ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಎಟಿಎಸ್ ಅನ್ನು ಬಳಸಿಕೊಂಡು ಹಿಂದೂ ಭಯೋತ್ಪಾದಕರನ್ನು ಸೃಷ್ಟಿಸಲು ಹೊರಟಿದೆ ಎಂದು ಆಪಾದಿಸಿದರು.

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಎಟಿಎಸ್ ಅನ್ನು ಬಳಸಿಕೊಂಡಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಇದು ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಎಂದು ಹರಿಹಾಯ್ದಿರುವ ಅವರು, ಕಾಂಗ್ರೆಸ್ ದುರುದ್ದೇಶಪೂರ್ವಕವಾಗಿ ರಾಜಕೀಯ ಲಾಭಕ್ಕಾಗಿ ಇಂತಹ ಕೀಳುಮಟ್ಟಕ್ಕಿಳಿಯುತ್ತಿದೆ ಎಂದರು.

ಸರಿಯಾದ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಕೂಡ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಇವೆಲ್ಲವೂ ಯುಪಿಎ ಸ್ಪಷ್ಟ ನಿರ್ದೇಶನದ ಮೇಲೆ ನಡೆಯುತ್ತಿದೆ ಎಂದು ನಾಯ್ಡು ದೂರಿದರು.

ಈಗಾಗಲೇ ಕೆಲವು ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ ಈ ಹಿನ್ನೆಲೆಯಲ್ಲಿ ಯುಪಿಎ ಇಂತಹ ರಾಜಕೀಯ ತಂತ್ರಗಳನ್ನು ಬಳಸುತ್ತಿರುವುದು ಸರಿಯಲ್ಲ ಎಂದ ಅವರು, ಈ ಕುರಿತು ನಾವು ಚುನಾವಣಾ ಆಯೋಗಕ್ಕೂ ದೂರು ನೀಡುವ ಕುರಿತು ಯೋಚಿಸುತ್ತಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಗ್ಯಾಗೆ ಎಟಿಎಸ್‌ ಅಧಿಕಾರಿಗಳಿಂದ ಕಿರುಕುಳ: ವಕೀಲ
ಜೈಲಿನಲ್ಲಿರಬೇಕಿದ್ದವರ ಕೈಯಲ್ಲಿ ಆಡಳಿತವಿದೆ: ರಾಮ್‌ದೇವ್
60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
ಮುಂಬೈ ಪ್ರಾರ್ಥನಾ ಮಂದಿರದಾಳಿ: 8 ಬಂಧನ
ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
ಕಣಿವೆ ರಾಜ್ಯದ ಮತದಾನಕ್ಕೆ ಕ್ಷಣಗಣನೆ