ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
ದೇಶಾದ್ಯಂತ ಹಲವಾರು ಬಾಂಬ್ ಸ್ಫೋಟ ಸಂಭವಿಸಿ ಸಾವು-ನೋವು ಉಂಟಾದ ಪ್ರಕರಣಗಳಲ್ಲಿ ಆಗದೇ ಇದ್ದದ್ದು, ಮೂವರು ಗಾಯಗೊಂಡ ಸ್ಫೋಟ ಪ್ರಕರಣವೊಂದರಲ್ಲಿ ನಡೆದಿದೆ. ಅತ್ಯಂತ ತ್ವರಿತವಾಗಿ ಕಣಕ್ಕಿಳಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು, ಕೇವಲ 24 ಗಂಟೆಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿ ತಮ್ಮ ತನಿಖಾ ಸಾಮರ್ಥ್ಯ ಮೆರೆದಿದ್ದಾರೆ.

2004ರ ಆಗಸ್ಟ್ 27ರಂದು ಜಲ್ನಾ ಎಂಬಲ್ಲಿನ ಖಾದ್ರಿಯಾ ಮಸೀದಿ ಸಮೀಪ ಬಾಂಬ್ ಸ್ಫೋಟ ನಡೆದು ಮೂವರು ಗಾಯಗೊಂಡಿದ್ದರು. ಇದಕ್ಕೆ ಸಂಬಂಧಿಸಿ ಸದರ್ ಬಜಾರ್ ಪೊಲೀಸರು ಅದಾಗಲೇ ಐದು ಮಂದಿಯ ವಿರುದ್ಧ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಇದೀಗ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ "ಹಿಂದೂ ಭಯೋತ್ಪಾದನೆ" ಎಂಬ ಅಂಶದೊಂದಿಗೆ ರಾಕೇಶ್ ಧಾವಡೆ ಎಂಬಾತನ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ, ಆತನನ್ನು ಪುಣೆಯಿಂದ ಬಂಧಿಸಿದ್ದರು. ಖಾದ್ರಿಯಾ ಮಸೀದಿ ಸಮೀಪ ಬಾಂಬ್ ಸ್ಫೋಟಿಸಿದ ಆರೋಪಿಗಳಿಗೆ ತರಬೇತಿ ನೀಡಿದ್ದರು ಎಂಬುದು ಧಾವಡೆ ಮೇಲಿನ ಆರೋಪ.

ಜಲ್ನಾದಲ್ಲಿ 2004ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಧಾವಡೆಯನ್ನು ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಕೋರಿ ಶುಕ್ರವಾರ ಜಲ್ನಾ ಎಟಿಎಸ್ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಧಾವಡೆ ಹೆಸರು ಎಫ್ಐಆರ್‌ನಲ್ಲಿ ಇಲ್ಲವೇ ಇಲ್ಲ ಎಂದು ಧಾವಡೆ ಪರ ವಕೀಲರು ವಾದಿಸಿದರು.

ಸುದೀರ್ಘ ವಾದ-ವಿವಾದ ನಡೆದು ಮಧ್ಯಾಹ್ನದ ಬಳಿಕ ಧಾವಡೆಯನ್ನು ಜಲ್ನಾ ಎಟಿಎಸ್ ಕಸ್ಟಡಿಗೊಪ್ಪಿಸಿ ನ್ಯಾಯಾಲಯ ತೀರ್ಪು ನೀಡಿತು. ನಾಸಿಕ್‌ನಿಂದ ಜಲ್ನಾಕ್ಕೆ ತೆರಳಲು ಕನಿಷ್ಠ ಆರು ಗಂಟೆಗಳಾದರೂ ಬೇಕು. ಹೀಗಾಗಿ ಜಲ್ನಾಕ್ಕೆ ಹೋಗಿ, ಧಾವಡೆಯನ್ನು ಜಲ್ನಾಗೆ ಕರೆದೊಯ್ದು ವಿಚಾರಣೆಗೆ ಗುರಿಪಡಿಸಲು ಪೊಲೀಸರಿಗೆ ಕೆಲವೇ ಗಂಟೆಗಳು ಮಾತ್ರ ಲಭ್ಯ. ಆದರೆ ಮರು ದಿನವೇ ಅವರು ಧಾವಡೆ ವಿರುದ್ಧ ಆರೋಪ ಪಟ್ಟಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಭದ್ರತಾ ಕಾರಣ'ಗಳಿಗಾಗಿ ಆರೋಪಪಟ್ಟಿಯನ್ನು ಮರುದಿನವೇ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ ಜಲ್ನಾ ಎಸ್ಪಿ ಸಂದೀಪ್ ಕಾರ್ನಿಕ್.

ಈ ರೀತಿ, ಅದರಲ್ಲೂ ಭಯೋತ್ಪಾದನೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಈ ರೀತಿ ನಡೆಯುವುದಿಲ್ಲ. ಪ್ರಾಸಿಕ್ಯೂಶನ್ ಯಾವತ್ತಿಗೂ ಆರೋಪಿಯನ್ನು ಪ್ರಶ್ನಿಸಲು ಮತ್ತು ಸಾಕ್ಷ್ಯ ಸಂಗ್ರಹಿಸಲು ಪ್ರಯತ್ನಿಸುತ್ತದೆ. ಮಾತ್ರವಲ್ಲ, ಕೇಸಿನಲ್ಲಿ ಬಂಧಿತರಾದ ಇತರರೊಂದಿಗೆ ಮುಖಾಮುಖಿ ಏರ್ಪಡಿಸಲೂ ಅವರು ಪ್ರಯತ್ನಿಸಬಹುದು. ಇದಲ್ಲದೆ, ವಿಚಾರಣೆ ವೇಳೆ ಪ್ರಯೋಜನಕ್ಕೆ ಬರುವಂತಾಗಲು, ಆರೋಪಿಗಳಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆಯಲೂ ಅವರು ಯತ್ನ ಮಾಡಬಹುದು ಎಂದು ವಕೀಲರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಮೂಲಗಳು ಅಭಿಪ್ರಾಯ ಪಡುವ ಪ್ರಕಾರ, ಇದು ಅತ್ಯಂತ ಕಠಿಣವಾದ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ) ಕಾಯಿದೆ ಪ್ರಯೋಗಿಸುವ ಯತ್ನ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕಾರವನ್ನೇ ಸ್ಫೋಟಿಸುತ್ತಾ 60 ಕೆಜಿ ಆರ್‌ಡಿಎಕ್ಸ್?
ಜಮ್ಮು-ಕಾಶ್ಮೀರ: ಶೇ.40ರಷ್ಟು ಮತದಾನ
ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
ಕೇಂದ್ರದಿಂದ ಎಟಿಎಸ್ ದುರ್ಬಳಕೆ: ಬಿಜೆಪಿ
ಪ್ರಗ್ಯಾಗೆ ಎಟಿಎಸ್‌ ಅಧಿಕಾರಿಗಳಿಂದ ಕಿರುಕುಳ: ವಕೀಲ
ಜೈಲಿನಲ್ಲಿರಬೇಕಿದ್ದವರ ಕೈಯಲ್ಲಿ ಆಡಳಿತವಿದೆ: ರಾಮ್‌ದೇವ್