ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಬಿಸಿ ಖಾಲಿಸ್ಥಾನ: ಕೇಂದ್ರವನ್ನು ಪ್ರಶ್ನಿಸಿದ ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಿಸಿ ಖಾಲಿಸ್ಥಾನ: ಕೇಂದ್ರವನ್ನು ಪ್ರಶ್ನಿಸಿದ ಸು.ಕೋ
ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿನ ಇತರೆ ಹಿಂದುಳಿದ ಜಾತಿಗಳ(ಒಬಿಸಿ) ಮೀಸಲು ಖಾಲಿ ಸ್ಥಾನಗಳನ್ನು ಸಾಮಾನ್ಯ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವ ಮೂಲಕ ಭರ್ತಿಮಾಡಬೇಕೆಂಬ ಈ ಹಿಂದಿನ ನಿರ್ದೇಶನವನ್ನು ಅನುವರ್ತಿಸಲಾಗಿದೆಯೇ ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠವು ಕೇಂದ್ರವನ್ನು ಈ ಕುರಿತು ಪ್ರಶ್ನಿಸಿದೆ. ಅಲ್ಲದೆ, ಇತರ ಹಿಂದುಳಿದ ಜಾತಿಗಳ ಖಾಲಿಯಿರುವ ಸ್ಥಾನಗಳನ್ನು, ಹಿಂದಿನಿಂದ ಜಾರಿಗೆ ಬರುವಂತೆ ಆದಾಯ ಮಿತಿಯನ್ನು 2.5ಲಕ್ಷ ರೂಪಾಯಿ ಬದಲಿಗೆ 4.5ಲಕ್ಷ ರೂಪಾಯಿಗೆ ವಿಸ್ತರಿಸಿರುವ ಆರೋಪದ ಕುರಿತು ಸ್ಪಷ್ಟನೆ ನೀಡುವಂತೆಯೂ ನ್ಯಾಯಪೀಠಕ್ಕೆ ಸರ್ಕಾರಕ್ಕೆ ಆದೇಶ ನೀಡಿದೆ.

ನ್ಯಾಯಮ‌ೂರ್ತಿಗಳಾದ ಅರಿಜಿತ್ ಪಸಾಯತ್, ಆರ್.ವಿ.ರವೀಂದ್ರನ್, ಅಲ್ತಮಸ್ ಕಬೀರ್ ಮತ್ತು ದಲ್ವೀರ್ ಭಂಡಾರಿ ಅವರನ್ನೊಳಗೊಂಡ ನ್ಯಾಯಪೀಠವು, ಅಫಿದಾವಿತ್ ಸಲ್ಲಿಸುವ ಮೂಲಕ ಈ ಎರಡು ವಿಚಾರಗಳ ಕುರಿತು ಕೇಂದ್ರ ಸ್ಪಷ್ಟನೆ ನೀಡಬೇಕು ಎಂದು ಹೇಳಿದೆ.

ಸರಕಾರವು ಖಾಲಿ ಇರುವ ಒಬಿಸಿ ಸೀಟುಗಳನ್ನು, ಒಬಿಸಿಗಳ ಆದಾಯ ಮಿತಿಯನ್ನು ವಿಸ್ತರಿಸುವ ಮ‌ೂಲಕ, ಸರ್ವೋಚ್ಚ ನ್ಯಾಯಾಲಯ ಇಂಥಹ ಸ್ಥಾನಗಳಿಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ನೇಮಿಸುವಂತೆ ಈ ಹಿಂದೆ ವಿಸ್ತರಿಸಿದ್ದ ಅನುಕೂಲವನ್ನು ನಿರಾಕರಿಸಿದೆ ಎಂಬುದಾಗಿ ವಿದ್ಯಾರ್ಥಿ ವಿಶ್ವಾನಾಥ್ ರೆಡ್ಡಿ ಎಂಬಾತ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆಗೆ ನ್ಯಾಯಪೀಠವು ಈ ನಿರ್ದೇಶನ ನೀಡಿದೆ.

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಯು ಒಬಿಸಿಗಳಿಗೆ ನೀಡುವ ಶೇ.27ರ ಮೀಸಲಾತಿಯಲ್ಲಿ ಭರ್ತಿಯಾಗದೆ ಖಾಲಿ ಇರುವ ಖಾಲಿ ಸ್ಥಾನಗಳಿಗೆ ಸಾಮಾನ್ಯವರ್ಗದ ಆಭ್ಯರ್ಥಿಗಳನ್ನು ತುಂಬಿಸಿಕೊಳ್ಳಬೇಕು ಎಂದು ಅಕ್ಟೋಬರ್ 14ರಂದು ಸಾಂವಿಧಾನಿಕ ಪೀಠವು ದೃಢವಾದ ಸೂಚನೆ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
ಸರಕಾರವನ್ನೇ ಸ್ಫೋಟಿಸುತ್ತಾ 60 ಕೆಜಿ ಆರ್‌ಡಿಎಕ್ಸ್?
ಜಮ್ಮು-ಕಾಶ್ಮೀರ: ಶೇ.40ರಷ್ಟು ಮತದಾನ
ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
ಕೇಂದ್ರದಿಂದ ಎಟಿಎಸ್ ದುರ್ಬಳಕೆ: ಬಿಜೆಪಿ
ಪ್ರಗ್ಯಾಗೆ ಎಟಿಎಸ್‌ ಅಧಿಕಾರಿಗಳಿಂದ ಕಿರುಕುಳ: ವಕೀಲ