ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
ನವದೆಹಲಿ: ರಾಷ್ಟ್ರದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಪ್ರಜ್ಞಾಹೀನವಾದ ಹಿಂಸಾಚಾರ ಮತ್ತು ಗೊಂದಲಗಳನ್ನು ಬಲವಾಗಿ ಖಂಡಿಸಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರು, ನಿವರ್ತಿತ ರೀತಿಯ ರಾಜಕೀಯ ಚಟುವಟಿಕೆಗಳು ಸಾಂವಿಧಾನಿಕ ವ್ಯವಸ್ಥೆಯನ್ನು ಕಟ್ಟಲಾಗಿರುವ ಅಡಿಪಾಯಕ್ಕೇ ಬೆದರಿಕೆ ಒಡ್ಡುತ್ತಿದೆ ಎಂಬ ಗಂಭೀರ ಹೇಳಿಕೆ ನೀಡಿದ್ದಾರೆ.

ಪ್ರಸಕ್ತ ರಾಜಕೀಯ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಅಸಾಧಾರಣ ರೀತಿಯಲ್ಲಿ ಕಟುವಾಗಿ ಭಾಷಣ ಮಾಡಿದ ಬಾಲಕೃಷ್ಣನ್, "ಕೆಲವು ಪಂಗಡಗಳಲ್ಲಿ ಬಲವಾದ ಅಭಿಪ್ರಾಯಗಳ ಧ್ರುವೀಕರಣವಿದ್ದರೂ, ವೈರುಧ್ಯಗಳ ಪದ್ಧತಿಯನ್ನು ವಿರೋಧಿಸುವಂತ ಪ್ರೇರಣಾ ವ್ಯನಸ್ಥೆಗೆ ಆದ್ಯತೆ ನೀಡುವ ಅಗತ್ಯವಿದೆ" ಎಂದು ಖಾರವಾಗಿ ನುಡಿದರು.

"ಮಾತುಕತೆಯು ಉತ್ತಮ ಪರಿಹಾರವೆಂಬಂತಹ ಸಂದರ್ಭಗಳಲ್ಲೂ ಅತಿ ಕ್ಷುಲ್ಲಕ ಕಾರಣಗಳಿಗೆ ಚಳುವಳಿಗಳನ್ನು ನಡೆಸಲಾಗುತ್ತಿದೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭೀತಿ ಒಡ್ಡಲಾಗಿದೆ. ಇಂತಹ ಹಿಂಜರಿಕೆ ರೀತಿಯ ರಾಜಕೀಯ ಕ್ರಿಯೆಯು, ಕಾನೂನಿ ನಿಯಮ, ಕಾನೂನಿನೆದುರು ಸಮಾನತೆ ಮತ್ತು ಕಾನೂನು ಪ್ರಕ್ರಿಯೆ ಮುಂತಾದ ಸಾಂವಿಧಾನಿಕ ವ್ಯವಸ್ಥೆಯ ನಿರ್ಮಾಣದ ತಳಪಾಯವನ್ನೇ ಅಲ್ಲಾಡಿಸುವಂತ ಭೀತಿ ಒಡ್ಡಿದೆ" ಎಂದು ಮಾರ್ಮಿಕವಾಗಿ ನುಡಿದರು.

'ರಾಷ್ಟ್ರೀಯ ಮೌಲ್ಯ ಬಿಕ್ಕಟ್ಟು ಮತ್ತು ನಿವಾರಣೆ' ಎಂಬ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಮುಖ್ಯ ನ್ಯಾಯಾಧೀಶರು, ಪ್ರಜಾಪ್ರಭುತ್ವ ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

"ನಮ್ಮ ಪ್ರಜಾಪ್ರಭುತ್ವವನ್ನು ಪ್ರಬುದ್ಧಗೊಳಿಸಲು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭಿನ್ನತೆಗಳನ್ನು ಸಮರ್ಥ ಹಿತಾಸಕ್ತ ಪಂಗಡಗಳ ನಡುವೆ ರಚನಾತ್ಮಕ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು" ಎಂದು ಅವರು ಸಹಲೆ ಮಾಡಿದ್ದಾರೆ.

ಜಾತಿ, ಧರ್ಮ, ಲಿಂಗ, ವರ್ಗ ಮತ್ತು ಪ್ರಾಂತೀಯತೆಯ ಆಧಾರದ ಭಿನ್ನತೆಗಳು ಸಂಘಟಿತ ಮತ್ತು ಕೆಲವೊಮ್ಮೆ ಸಾಂಸ್ಥಿಕ ಹಿಂಸಾಚಾರಗಳ ಮೂಲಕಾರಣವಾಗುತ್ತಿರುವುದು ಅತ್ಯಂತ ಖೇದಕರ ಎಂದವರು ತೀವ್ರ ವೇದನೆ ವ್ಯಕ್ತಪಡಿಸಿದರು.

ವಿಶೇಷವಾಗಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿನ ಪ್ರಜ್ಞಾಹೀನ ಹಿಂಸಾಚಾರವು ಹಲವು ಕಡೆಗಳಲ್ಲಿ ಜನರ ದೈನಂದಿನ ಚಟುವಟಿಕೆಗಳಿಗೆ ಧಕ್ಕೆಯುಂಟುಮಾಡಿದೆ. ಹೆಚ್ಚಿನ ಉದಾಹರಣೆಗಳಲ್ಲಿ ಇಂತಹ ಅತಿರೇಕದ ಕ್ರಮಗಳು ಮತದಾರರ ಧ್ರುವೀಕರಣಕ್ಕಾಗಿ ನಡೆಸಲಾಗುತ್ತಿರುವ ತಂತ್ರ ಎಂಬುದು ಸ್ಪಷ್ಟ ಎಂದು ಅವರು ನುಡಿದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಟ್ವರ್‌ಸಿಂಗ್‌ರನ್ನು ಹೊರದಬ್ಬಿದ ಬಿಎಸ್ಪಿ
ಪುರೋಹಿತ್‌ಗೆ ನ.29ರ ತನಕ ನ್ಯಾಯಾಂಗ ಬಂಧನ
ಯುವಜನತೆ ರಾಜಕೀಯ ಇಮೇಜ್ ಬದಲಿಸಬಲ್ಲರು: ಆಡ್ವಾಣಿ
ಪಾನಿಪತ್ ಹೆದ್ದಾರಿಯಲ್ಲಿ ಅಪಘಾತ: 16 ಸಾವು
ಒಬಿಸಿ ಖಾಲಿಸ್ಥಾನ: ಕೇಂದ್ರವನ್ನು ಪ್ರಶ್ನಿಸಿದ ಸು.ಕೋ
24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!