ಉಗ್ರವಾದವನ್ನು ಹತ್ತಿಕ್ಕಲು ಸರ್ಕಾರವು ಉತ್ತಮ ಕಾರ್ಯವನ್ನೇ ಕೈಗೊಂಡಿದೆ ಎಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಮಾಲೆಗಾಂವ್ ಸ್ಫೋಟ ಶಂಕಿತರು ಮತ್ತು ತನ್ನ ಅಂಗಸಂಸ್ಥೆಗಳಿಗಿರುವ ಸಂಪರ್ಕಗಳ ಕುರಿತು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.ಮಾಲೆಗಾಂವ್ ಸ್ಫೋಟ ಶಂಕಿತರಿಗೆ ಪಕ್ಷದೊಂದಿಗಿನ ಸಂಪರ್ಕಗಳ ಕುರಿತು ಬಿಜೆಪಿಯು ಒಂದು ನೋಟ ಹರಿಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನುಡಿದರು. ಪಂಜಾಬ್‌ನಲ್ಲಿ ಭಾರತೀಯ ಯುವ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿಯನ್ನು ಘೋಷಿಸಲು ಅವರು ಪತ್ರಿಕಾಗೋಷ್ಠಿ ಕರೆದಿದ್ದರು.ಕಾಂಗ್ರೆಸ್ ಉಗ್ರವಾದವನ್ನು 'ರಾಜಕೀಯಗೊಳಿಸುತ್ತಿದೆ' ಎಂಬ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಆಡ್ವಾಣಿಜಿಯವರು ಕಾಂಗ್ರೆಸ್ ಭಯೋತ್ಪಾದನೆಯನ್ನು ರಾಜಕೀಯಗೊಳಿಸುತ್ತಿದೆ ಎಂಬ ದೃಷ್ಟಿ ಹೊಂದಿರಬಹುದು. ಆದರೆ, ತಾನೇನುಮಾಡುತ್ತಿದೆ ಎಂದು ನೋಟಹರಿಸುವ ಅವಶ್ಯಕತೆ ಬಿಜೆಪಿಗಿದೆ" ಎಂದು ನುಡಿದರು.ರಾಹುಲ್ ಗಾಂಧಿಯವರನ್ನು ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು 'ಬಚ್ಚಾ'(ಮಗು) ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತಾನು ನಿಜವಾಗಿಯೂ 'ಬಚ್ಚಾ' ಎಂದರು.ರಾಜ್‌ನಾಥ್ ಸಿಂಗ್ ಮತ್ತು ಇತರರಿಗೆ ಹೋಲಿಸಿದರೆ ನಾನು ಸಂಪೂರ್ಣ ಬಚ್ಚಾ. ಆದರೆ ಅದೃಷ್ಟವಶಾತ್ ಇಲ್ಲವೇ ದುರದೃಷ್ಟವಶಾತ್, ರಾಷ್ಟ್ರದ ಶೇ.70ರಷ್ಟು ಮಂದಿ ಬಚ್ಚಾಗಳು ಎಂದವರು ನುಡಿದರು. ನನಗೆ ಅವರ ಅರ್ಧದಷ್ಟೂ ಅನುಭವವಿಲ್ಲ ಎಂದು ಯುವ ಸಂಸದ ರಾಹುಲ್ ಹೇಳಿದರು. ಅದರೆ, ಬಚ್ಚಾ ಎಂಬ ಶಬ್ದವನ್ನು ನಿಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು ಎಂದು ನುಡಿದರು. |