ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಸೆಸ್) ಅಥವಾ ಬಜರಂಗಳ ದಳಗಳು ಭಯೋತ್ಪಾದನಾ ಸಂಘಟನೆಗಳಲ್ಲ ಮತ್ತು ಇದರ ಸದಸ್ಯರನ್ನು ಬ್ರಿಟನ್‌ಗೆ ಪ್ರವೇಶಿಸುವುದರಿಂದ ತಡೆಯುವುದಿಲ್ಲ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ.

"ಸರ್ಕಾರವು ಆರೆಸ್ಸೆಸ್ ಅಥವಾ ಬಜರಂಗದಳವನ್ನು ಭಯೋತ್ಪಾದನಾ ಸಂಘಟನೆಗಳೆಂದು ಪರಿಗಣಿಸುವುದಿಲ್ಲ" ಎಂದು ಬ್ರಿಟನ್ ವಿದೇಶಾಂಗ ಮತ್ತು ಕಾಮನ್ವೆಲ್ತ್ ಇಲಾಖಾ ರಾಜ್ಯಸಚಿವ ಲಾರ್ಡ್ ಮಲ್ಲೋಕ್ ಬ್ರೌನ್ ಅವರು ಬ್ರಿಟನ್ ಸಂಸತ್, ಹೌಸ್‌ ಆಫ್ ಲಾರ್ಡ್ಸ್‌ಗೆ ಹೇಳಿದ್ದಾರೆ.

"ಭಾರತ ಇಲ್ಲವೇ ಬ್ರಿಟನ್‌ನಲ್ಲಿ ಈ ಸಂಘಟನೆಗಳನ್ನು ಬಹಿಷ್ಕರಿಸಿಲ್ಲ, ಇಲ್ಲವೇ ಭಾರತ ಸರ್ಕಾರವು ಇವುಗಳನ್ನು ಭಯೋತ್ಪಾದನಾ ಸಂಘಟನೆ ಎಂದು ವರ್ಗೀಕರಿಸಿಲ್ಲ" ಎಂದು ಅವರು ಮಾಜಿ ಸಂಪುಟ ಸಚಿವ ಲಾರ್ಡ್ ಕ್ರಿಸ್ ಪ್ಯಾಟ್ಟನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.

ಭಯೋತ್ಪಾದನಾ ಕಾಯ್ದೆ 2000ರಲ್ಲಿ ವ್ಯಾಖ್ಯಾನಿಸಿರುವ ಪ್ರಕಾರ ಒಂದು ಸಂಘಟನೆಯು ಭಯೋತ್ಪಾದನೆಯಲ್ಲಿ ತೊಡಗಿರುವ ಕುರಿತ ಪುರಾವೆ ಮತ್ತು ಯಥೋಚಿತ ಪ್ರಕಾರ ಸಂಘನೆಯೊಂದನ್ನು ನಿಷೇಧಿಸಬೇಕೆ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಅವರು ನುಡಿದರು.

ಆರೆಸ್ಸೆಸ್ ಮತ್ತು ಬಜರಂಗದಳದ ಸದಸ್ಯರ ಬ್ರಿಟನ್ ಪ್ರವೇಶವನ್ನು ತಡೆಯುವ 'ಖಚಿತತೆ' ಕುರಿತಂತೆ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಪ್ಯಾಟನ್ ಅವರು ಮಾಡಿದ ಮನವಿಯನ್ನು ಸಚಿವರು ತಳ್ಳಿಹಾಕಿದರು.

ಈ ಎರಡು ಸಂಘಟನೆಗಳನ್ನು ಬ್ರಿಟನ್‌ನಲ್ಲಿ ನಿಷೇಧಿಸಿಲ್ಲ ಮತ್ತು ಯಾವುದೇ ನಿಷೇಧ ಅಥವಾ ದಿಗ್ಬಂಧನಗಳನ್ನೂ ಹೇರಿಲ್ಲ. ಅಥವಾ ಇವುಗಳನ್ನು ಭಾರತ ಸರ್ಕಾರ ನಿಷೇಧಿಸಿಲ್ಲ ಇಲ್ಲವೇ, ಭಯೋತ್ಪಾದನಾ ಸಂಘಟನೆಗಳೆಂದು ವರ್ಗೀಕರಿಸಿಲ್ಲ ಎಂದು ಮಲ್ಲೋಕ್ ಬ್ರೌನ್ ತನ್ನ ಉತ್ತರದಲ್ಲಿ ಹೇಳಿದ್ದಾರೆ.

ಭಯೋತ್ಪಾದನಾ ಕಾಯ್ದೆ 2000ರ ಪ್ರಕಾರ ಬಹಿಷ್ಕರಿಸದ ಹೊರತು ಯಾವುದೇ ಸಂಸ್ಥೆಯು ಬ್ರಿಟನ್‌ಗೆ ಪ್ರವೇಶಿಸುವುದನ್ನು ತಡೆಯುವಂತಿಲ್ಲ ಎಂದು ಅವರು ನುಡಿದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್
ಇಂದಿರಾ ಗಾಂಧಿ 91ನೆ ಜಯಂತಿ
ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು
ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
ನಟ್ವರ್‌ಸಿಂಗ್‌ರನ್ನು ಹೊರದಬ್ಬಿದ ಬಿಎಸ್ಪಿ
ಪುರೋಹಿತ್‌ಗೆ ನ.29ರ ತನಕ ನ್ಯಾಯಾಂಗ ಬಂಧನ