ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಒರಿಸ್ಸಾದ ಕಂಧಮಲ್‌ನಲ್ಲಿ ನಡೆದ ಕೋಮುಗಲಭೆಯ ವೇಳೆಗೆ ಅತ್ಯಾಚಾರಕ್ಕೀಡಾಗಿದ್ದಾರೆ ಎಂದು ಹೇಳಲಾಗಿರುವ ಕ್ರೈಸ್ತ ಸನ್ಯಾಸಿನಿ, ಈ ದುರ್ಘಟನೆಯ ಬಳಿಕ ಸಾಮೂಹಿಕ ಅತ್ಯಾಚಾರದಿಂದ ತನ್ನನ್ನು ಸ್ಥಳೀಯ ಹಿಂದೂ ಒಬ್ಬ ಕಾಪಾಡಿರುವುದಾಗಿ ಒರಿಸ್ಸಾ ಕ್ರೈಂ ಬ್ರಾಂಚ್ ಪೊಲೀಸರಿಗೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಬಲಿಪಶು ಸನ್ಯಾಸಿನಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿದ್ದು, ಆಗಸ್ಟ್ 25ರಂದು ಒರಿಸ್ಸಾ ಬಂದ್ ವೇಳೆ ಬಾಲಿಗುಡುದ ಕೆ ನೌಗಾಂವ್ ಎಂಬಲ್ಲಿ ತಾನು ಅತ್ಯಾಚಾರಕ್ಕೀಡಾಗಿರುವುದಾಗಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ. ಇದಾದ ಬಳಿಕ ಮತ್ತಿಬ್ಬರು ಲೈಂಗಿಕ ಕಿರುಕುಳ ನೀಡಿದ್ದು, ಇವರೂ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸ್ಥಳೀಯ ಹಿಂದೂ ಒಬ್ಬ ಇವರಿಂದ ತನ್ನನ್ನು ಕಾಪಾಡಿರುವುದಾಗಿ ಸನ್ಯಾಸಿನಿ ಕ್ರೈಂ ಬ್ರಾಂಚ್ ಎದುರು ಹೇಳಿದ್ದಾರೆ.

ಸನ್ಯಾಸಿನಿ ಹಾಗೂ ಈ ಘಟನೆಯ ಏಕೈಕ ಸಾಕ್ಷಿಯಾಗಿರುವ ಫಾದರ್ ಥೋಮಸ್ ಚೇಲನ್ ಅವರುಗಳನ್ನು ಸಾಯಂಕಾಲ 5ಗಂಟೆಯಿಂದ 7.30ರ ವೇಳೆಗೆ ಪರೀಕ್ಷಿಸಲಾಯಿತು ಎಂದು ಐಜಿಪಿ(ಕ್ರೈಂ ಬ್ರಾಂಚ್) ದೃಢಪಡಿಸಿದ್ದಾರೆ. ತಾನು ಯಾರೊಂದಿಗೆ ಬಡಿದಾಡಿದ್ದೇನೋ ಆ ದುಷ್ಕರ್ಮಿಯನ್ನು ತಾನು ಗುರುತಿಸಬಲ್ಲೆ ಎಂಬ ವಿಶ್ವಾಸವನ್ನು ಸನ್ಯಾಸಿನಿ ತನಿಖೆಯ ವೇಳೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾನು ಅತ್ಯಾಚಾರಕ್ಕೀಡಾದ ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿದ್ದ ಕಾರಣ, ಬಳಿಕ ಅತ್ಯಾತಚಾರಕ್ಕೆ ಯತ್ನಿಸಿದ ಮತ್ತಿಬ್ಬರನ್ನು ಗುರುತಿಸುವುದು ಕಷ್ಟವಾಗಬಹುದು ಎಂದು 29ರ ಹರೆಯದ ಸನ್ಯಾಸಿನಿ ಹೇಳಿದ್ದಾರೆ.

ಕಂಧಮಲ್‌ಗೆ ಮತ್ತೆ ಮರಳಲು ತನಗೆ ಇಷ್ಟವಿಲ್ಲ ಎಂದು ನುಡಿದ ಸನ್ಯಾಸಿನಿ, ದುಷ್ಕರ್ಮಿಗಳನ್ನು ಗುರುತಿಸುವ ಪೆರೇಡನ್ನು ಕಂಧಮಲ್ ಹೊರತಾಗಿ ಒರಿಸ್ಸಾದ ಬೇರೆ ಯಾವುದಾದರೂ ಜಾಗದಲ್ಲಿ ನಡೆಸಬೇಕು ಎಂದೂ ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್
ಇಂದಿರಾ ಗಾಂಧಿ 91ನೆ ಜಯಂತಿ
ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು
ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
ನಟ್ವರ್‌ಸಿಂಗ್‌ರನ್ನು ಹೊರದಬ್ಬಿದ ಬಿಎಸ್ಪಿ