ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕರುಣಾನಿಧಿಗೆ ಜಯಾ ನೋಟೀಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರುಣಾನಿಧಿಗೆ ಜಯಾ ನೋಟೀಸ್
PTI
ಇತ್ತೀಚೆಗೆ ಇಲ್ಲಿನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಗೆ ವಿರೋಧ ಪಕ್ಷದ ಚಿತಾವಣೆ ಕಾರಣ ಎಂಬ ಮುಖ್ಯಮಂತ್ರಿ ಕರುಣಾನಿಧಿಯವರ ಹೇಳಿಕೆಯನ್ನು ಪ್ರಶ್ನಿಸಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ. ಜಯಲಲಿತಾ ಲಾಯರ್ ನೋಟೀಸ್ ನೀಡಿದ್ದಾರೆ.

ಇಪ್ಪತ್ತನಾಲ್ಕು ಗಂಟೆಗಳೊಳಗಾಗಿ ತನ್ನ ಹೇಳಿಕೆಯ ಕುರಿತು ಕ್ಷಮೆ ಕೋರುವಲ್ಲಿ ಕರುಣಾನಿಧಿ ವಿಫಲವಾದಲ್ಲಿ, ಕರುಣಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮತ್ತು ತನ್ನ ಪ್ರತಿಷ್ಠೆಗೆ ಭಂಗ ಉಂಟುಮಾಡಿವುದಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರ ಕೋರುವುದಾಗಿಯೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಎಚ್ಚರಿಕೆ ನೀಡಿದ್ದಾರೆ.

ಕರುಣಾನಿಧಿ ಅವರು ಈ ಗಲಭೆಯ ಕುರಿತು ದುರುದ್ದೇಶ ಪೂರಿತ ಹೇಳಿಕೆ ನೀಡಿದ್ದಾರೆ ಎಂದು ಜಯಾ ಆರೋಪಿಸಿದ್ದಾರೆ.

ಕುತೂಹಲವೆಂಬಂತೆ ತನ್ನ ಈ ಹೇಳಿಕೆಯು ಒಂದು ಹಾಸ್ಯ ಚಟಾಕಿ ಅಷ್ಟೆ ವಿನಹ ಯಾರದ್ದೇ ಪ್ರತಿಷ್ಠೆಗೆ ಕುಂದುಂಟು ಮಾಡುವ ಉದ್ದೇಶದ್ದಲ್ಲ ಎಂದು ಕರುಣಾನಿಧಿ ಮಂಗಳವಾರ ಹೇಳಿದ್ದರು.

ಹೊಡೆದಾಟ ಘಟನೆಯನ್ನು ನಿಭಾಯಿಸುವಲ್ಲಿ ಕರುಣಾನಿಧಿ ಸೋತಿದ್ದಾರೆ ಎಂದು ಜಯಾ ಹೇಳುವ ಮೂಲಕ ಈ ಹೇಳಿಕೆಗಳ ಸಮರ ಆರಂಭವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್
ಇಂದಿರಾ ಗಾಂಧಿ 91ನೆ ಜಯಂತಿ