ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
PTI
ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ(ಐಎಇಎ)ಯ ಮುಖ್ಯಸ್ಥ ಮೊಹಮ್ಮದ್ ಅಲ್‌ಬರೇದಿ ಅವರನ್ನು 2008ರ ಇಂದಿರಾಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.

ಮನಮೋಹನ್ ಸಿಂಗ್ ಅಧ್ಯಕ್ಷತೆಯ ಅಂತಾರಾಷ್ಟ್ರೀಯ ತೀರ್ಪುಗಾರರ ಸಭೆಯಲ್ಲಿ, ಮಿಲಿಟರಿ ಉದ್ದೇಶಕ್ಕಾಗಿ ಅಣುಶಕ್ತಿಯ ಬಳಕೆಯ ಬಗ್ಗೆ ಸತತವಾಗಿ ವಿರೋಧ ವ್ಯಕ್ತಪಡಿಸಿರುವ ಮತ್ತು ಅಣುಶಕ್ತಿಯ ಶಾಂತಿಯುತ ಬಳಕೆಗೆ ಬಹು ವರ್ಷಗಳಿಂದ ಅವರು ಮಾಡಿರುವ ದೃಢ ಪ್ರಯತ್ನವನ್ನು ಪರಿಗಣಿಸಿ ಅಲ್‌ಬರೇದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಬೇಕೇಂದು ತೀರ್ಮಾನಿಸಲಾಯಿತು.

"ವಿಯೆನ್ನಾದ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮಹಾನಿರ್ದೇಶಕರಾಗಿರುವ ಡಾ. ಅಲ್‌ಬರೇದಿ ಅವರು ಅಣುಪ್ರಸರಣ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಯಾವಾಗಲೂ ಮುಕ್ತವಾಗಿ ಮಾತನಾಡಿದ್ದಾರೆ" ಎಂದು ಪುರಸ್ಕಾರವನ್ನು ನೀಡುತ್ತಿರುವ ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್‌ನ ಹೇಳಿಕೆಯೊಂದರಲ್ಲಿ ಅಭಿಪ್ರಾಯಿಸಲಾಗಿದೆ.

ಭಾರತ-ಅಮೆರಿಕ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಐಎಇಎಯಿಂದ ರಕ್ಷಣಾ ಒಪ್ಪಂದವನ್ನು ಪಡೆಯುವಲ್ಲಿ ಅಲ್‌ಬರೇದಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದಾಗಿಯೇ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣುಶಕ್ತಿಯ ವ್ಯವಹಾರ ಹಕ್ಕನ್ನು ಪಡೆಯುವಂತಾಗಿದೆ.

ಅಲ್‌ಬರೇದಿ ಐಎಇಎಯ ಮುಖ್ಯಸ್ಥರಾಗಿ 2005ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ 1997ರಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರುಣಾನಿಧಿಗೆ ಜಯಾ ನೋಟೀಸ್
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್