ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ
ಜೀವನಾಂಶದ ಭಾಗವಾಗಿ ತನ್ನ ವಿಚ್ಛೇದಿತ ಪತ್ನಿಯ ವೈದ್ಯಕೀಯ ಬಿಲ್ಲುಗಳನ್ನು ಪಾವತಿಮಾಡುವ ಬಾಧ್ಯತೆಗೆ ಪತಿಯು ಒಳಗಾಗುತ್ತಾನೆ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ನೀಡಿದೆ.

ಹಿಂದೂ ದತ್ತಕ ಮತ್ತು ಜೀವನಾಂಶ ಕಾಯ್ದೆ-1956ರನ್ನು ವ್ಯಾಖ್ಯಾನಿಸಿದ ನ್ಯಾಯಪೀಠವು, ಆಹಾರ, ವಸ್ತ್ರ, ನಿವಾಸ, ಶಿಕ್ಷಣ ಮತ್ತು ವೈದ್ಯಕೀಯ ಖರ್ಚುವೆಚ್ಚಗಳು ಜೀವನಾಂಶದಡಿಯಲ್ಲಿ ಬರುತ್ತದೆ ಎಂದು ಹೇಳಿತು.

ನ್ಯಾಯಮೂರ್ತಿಗಳಾದ ಸಿ.ಕೆ. ತಕ್ಕರ್, ಡಿ.ಕೆಜೈನ್ ಅವರನ್ನೊಗೊಂಡ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ. ರಾಜೇಶ್ ಬರ್ಮನ್ ಎಂಬಾತ ತನ್ನ ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ 3.6ಲಕ್ಷ ರೂಪಾಯಿ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ವೇಳೆಗೆ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಗಾಂಧಿ ಶಾಂತಿ ಪ್ರಶಸ್ತಿ
ಕರುಣಾನಿಧಿಗೆ ಜಯಾ ನೋಟೀಸ್
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್