ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ
ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಗುರುವಾರ ಮುಂಜಾನೆ ಸೇನೆಯು ಇಬ್ಬರು ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದೆ.

ಸಾಂಬಾ ಜಿಲ್ಲೆಯ ರಾಮಗಢ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಚಲಿಸುತ್ತಿದ್ದ ಇಬ್ಬರನ್ನು 8 ಡೋಗ್ರಾ ರೆಜಿಮೆಂಟ್ ಪಡೆಗಳು ಬಂಧಿಸಿವೆ.

ಈ ಇಬ್ಬರು ಸೇನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅವರನ್ನು ಬಳಿಕ ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ. ಬಂಧಿತರಿಬ್ಬರನ್ನು ಬಾಂಗ್ಲಾ ನಿವಾಸಿಗಳಾದ ಸಾದಿಕ್ ಮಿಯಾನ್ ಮತ್ತು ಅಬ್ದುಲ ಮಲಿಕ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ 175 ಅಮೆರಿಕನ್ ಡಾಲರ್ ಹಾಗೂ ಕೆಲವು ಬಾಂಗ್ಲಾ ದೇಶದ ನೋಟುಗಳು ಮತ್ತು 4,300 ರೂಪಾಯಿ ಭಾರತೀಯ ಹಣವೂ ಅವರ ಬಳಿ ಪತ್ತೆಯಾಗಿದೆ. ಹೆಚ್ಚಿನ ಕ್ರಮಕ್ಕಾಗಿ ಬಂಧಿತರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ
ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ಕರುಣಾನಿಧಿಗೆ ಜಯಾ ನೋಟೀಸ್
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ