ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿ ಪಾಟೀಲರಷ್ಟೆ ದುರ್ಬಲರಾಗಿದ್ದರು: ಗೋವಿಂದಾಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಪಾಟೀಲರಷ್ಟೆ ದುರ್ಬಲರಾಗಿದ್ದರು: ಗೋವಿಂದಾಚಾರ್ಯ
ಆರೆಸ್ಸೆಸ್ ಆದರ್ಶವಾದಿ ಗೋವಿಂದಾಚಾರ್ಯ ಅವರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿಯವರ ಮೇಲೆ ಟೀಕಾಪ್ರಹಾರ ಮಾಡಿದ್ದು, ಆಡ್ವಾಣಿ ತಮ್ಮ ಆಡಳಿತಾವಧಿಯಲ್ಲಿ ಪ್ರಸ್ತುತ ಗೃಹಸಚಿವ ಶಿವರಾಜ್ ಪಾಟೀಲರಷ್ಟೆ ದುರ್ಬಲರಾಗಿದ್ದರು ಎಂದು ಹೇಳಿದ್ದಾರೆ.

ಇವರಿಬ್ಬರಲ್ಲಿ ಯೂರು ಉತ್ತಮ ಎಂಬುದನ್ನು ನಿರ್ಧರಿಸುವುದ ಕಷ್ಟ. ಎನ್‌ಡಿಎಯ ಆರು ವರ್ಷದ ಆಡಳಿತಾವಧಿಯಲ್ಲಿ ಆಡ್ವಾಣಿಯವರಿಗೆ ಸಾಕಷ್ಟು ಕಾರ್ಯಗಳನ್ನು ಕೈಗೊಳ್ಳುವ ಅವಕಾಶ ಇದ್ದರೂ, ಅವರು ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳದೆ, ಅಲ್ಪಕಾರ್ಯ ಕೈಗೊಂಡಿದ್ದಾರೆ. ಸಂಸತ್ತಿನ ಮೇಲೆ ದಾಳಿಯಾಗಿದ್ದ ವೇಳೆ ಅವರಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪದನಾ ಶಿಬಿರಗಳ ಮೇಲೆ ದಾಳಿ ನಡೆಸುವ ಅವಕಾಶವಿದ್ದರೂ ಅವರು ಏನೂ ಮಾಡಲಿಲ್ಲ ಎಂದು ದೂರಿದ್ದಾರೆ.

ಜನವರಿ 14ರಂದು ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಮತ್ತು ಅಲ್ಲಿ ತನಕ ಉಮಾಭಾರತಿಯವರ ಭಾರತೀಯ ಜನಶಕ್ತಿ ಪಕ್ಷದ ನೇತೃತ್ವ ವಹಿಸುವುದಾಗಿ ಘೋಷಿಸಿದ ಮರುದಿನವಾದ ಬುಧವಾರ ಈ ವಾಕ್‌ಪ್ರಹಾರ ನಡೆಸಿದ್ದಾರೆ.

ಐಎಸ್ಐ ಭಯೋತ್ಪಾನೆಯನ್ನು ಉತ್ತೇಜಿಸುತ್ತಿರುವ ಕುರಿತು ಅವರು ಶ್ವೇತಪತ್ರವನ್ನು ಮಂಡಿಸಲಿಲ್ಲ, ಇಲ್ಲವೆ ಪ್ರಜೆಗಳ ರಾಷ್ಟ್ರೀಯ ನೋಂದಣಿಯನ್ನೂ ಮಾಡಲಿಲ್ಲ ಎಂದು ಗೋವಿಂದಾಚಾರ್ಯ ಆಡ್ವಾಣಿಯವರನ್ನು ದೂರಿದರು. ಅವರು ಕಸಾಯಿಖಾನೆಗಳ ಮೇಲೆ ನಿಷೇಧ ಹೇರುವ ಕುರಿತು ಮಾತನಾಡುತ್ತಿರುವಂತೆಯೇ ಕಸಾಯಿಖಾನೆಗಳ ಸಂಖ್ಯೆ ಏರುತ್ತಲೇ ಹೋದವು. ಅವರ ಆಡಳಿತಾವಧಿಯಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಿತು ಎಂದೂ ಆಪಾದಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ
ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ
ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ
ಕರುಣಾನಿಧಿಗೆ ಜಯಾ ನೋಟೀಸ್
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ