ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಿಎಸ್‌ಯು ನೌಕರರ ವೇತನ ಪರಿಷ್ಕರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಎಸ್‌ಯು ನೌಕರರ ವೇತನ ಪರಿಷ್ಕರಣೆ
ಕೇಂದ್ರದ ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸಿಬ್ಬಂದಿಗಳ ವೇತನದಲ್ಲಿ ಭಾರೀ ಏರಿಕೆಯಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ವೇತನ ಏರಿಕೆಗೆ ಅನುಮತಿ ನೀಡಲಾಗಿದೆ. ಸಿಬ್ಬಂದಿಗಳ ವೇತನದಲ್ಲಿ ಶೇ.50ರಿಂದ 300ರ ತನಕ ಏರಿಕೆಯಾಗಲಿದೆ. ನೂತನ ವೇತನ ದರವು 2007ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.

216 ಕೇಂದ್ರೀಯ ಸಾರ್ವಜನಿಕ ವಲಯದ ಸಂಸ್ಥೆಗಳ 1,20,000 ಸಂಘಟಿತರಲ್ಲದ ಮೇಲ್ವಿಚಾರಣ ಸಿಬ್ಬಂದಿ ಮತ್ತು 2,58,000 ಮಂಡಳಿ ಮಟ್ಟದ ಅಧಿಕಾಗಳು ವೇತನ ಹೆಚ್ಚಳದ ಅನುಕೂಲ ಪಡೆಯಲಿದ್ದಾರೆ.

ಲಾಭದಲ್ಲಿರುವ ಸಾರ್ವಜನಿಕ ಸಂಸ್ಥೆಯ ಉದ್ಯೋಗಿಗಳಿಗೆ ಏಕ ರೀತಿಯ ಹೆಚ್ಚಳ ಮಾಡಲಾಗಿದೆ. ಮೂಲ ವೇತನಮತ್ತು ತುಟ್ಟಿಭತ್ಯೆಯ ಶೇ.30ರಷ್ಟು ಏರಿಕೆಯಾಗಲಿದೆ.

ದುರ್ಬಲ ಮತ್ತು ಲಾಭೇತರ ಸಂಸ್ಥೆಗಳ ಸಿಬ್ಬಂದಿಗಳ ವೇತನದಲ್ಲಿ ಸಂಸ್ಥೆಗಳ ಶಕ್ತ್ಯಾನುಸಾರ 10ರಿಂದ 20ಶೇಕಡಾದಷ್ಟು ಏರಿಕೆ ಕಾಣಲಿದೆ.

ವೇತನ ಹೆಚ್ಚಳ ಪ್ಯಾಕೇಜಿನಲ್ಲಿ ವೈಯಕ್ತಿಕ ಕಾರ್ಯಕ್ಷಮತೆಯ ಉತ್ತೇಜಕ ಭತ್ಯೆಯಲ್ಲದೆ, ಮನೆಬಾಡಿಗೆಯಂತಹ ಭತ್ಯೆಗಳಲ್ಲೂ ಏರಿಕೆಯಾಗಿದೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಪೃಥ್ವಿರಾಜ್ ಚೌವ್ಙಾಣ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಧ್ವಿ, ಪಾಂಡೆ, ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ವಿಡಿಯೋ
ಎಟಿಎಸ್ ವಿರುದ್ಧ ದಾವೆ ಹೂಡಿದ ಶಿವಸೇನೆ
ಆಡ್ವಾಣಿ ಪಾಟೀಲರಷ್ಟೆ ದುರ್ಬಲರಾಗಿದ್ದರು: ಗೋವಿಂದಾಚಾರ್ಯ
ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ
ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ
ಐಎಇಎ ಮುಖ್ಯಸ್ಥ ಅಲ್‌ಬರಾದಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ