ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
ನವದೆಹಲಿ: ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿಪ್ರಗ್ಯಾ ಸಿಂಗ್ ಸಲ್ಲಿಸಿರುವ ಪ್ರಮಾಣ ಪತ್ರದ ಕುರಿತು ಆಡ್ವಾಣಿ ಮಾಡಿರುವ ಆಪಾದನೆಗಳ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಆಡ್ವಾಣಿಯವರಿಗೆ ದೂರವಾಣಿ ಕರೆ ನೀಡಿರುವ ಎರಡು ದಿನಗಳ ಬಳಿಕ ಶುಕ್ರವಾರ, ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣನ್ ಅವರು ಆಡ್ವಾಣಿಯವರನ್ನು ಭೇಟಿಯಾಗಿ ಮುಂಬೈ ಪೊಲೀಸ್ ಭಯೋತ್ಪಾದನಾ ನಿಗ್ರಹದಳ(ಎಟಿಎಸ್)ದ ತನಿಖೆಯ ಕುರಿತು ಮಾಹಿತಿ ನೀಡಲಿದ್ದಾರೆ.

ಗುಪ್ತಚರದಳದ ಮುಖ್ಯಸ್ಥ ಪಿ.ಸಿ.ಹಲ್ದಾರ್ ಅವರೂ ನಾರಾಯಣನ್ ಜತೆಗೆ ಇರಲಿದ್ದಾರೆ ಎಂದು ಉನ್ನತ ಬಿಜೆಪಿ ಮ‌ೂಲಗಳು ಹೇಳಿವೆ.

ಮಾಲೆಗಾಂವ್ ತನಿಖಾ ವಿಚಾರದ ಕುರಿತು ಮಾಹಿತಿ ನೀಡುವ ಇರಾದೆಯಿಂದ ಪ್ರಧಾನಿ ಆಡ್ವಾಣಿಯವರಿಗೆ ಕರೆ ನೀಡಿದ್ದಾಗ, ಆಡ್ವಾಣಿಯವರು ಒತ್ತಾಯ ಪೂರ್ವಕವಾಗಿ ಸಾಧ್ವಿಯ ವಿಚಾರವನ್ನು ಪ್ರಸ್ತಾಪಿಸಿದರು ಎಂದು ಮೂಲಗಳು ಹೇಳಿವೆ.

"ಪ್ರಗ್ಯಾ ಸಿಂಗ್ ನಾಸಿಕ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವಿತ್ ನೋಡಿದ್ದಾರಾ? ಆಕೆ, ತನಗೆ ಯಾವ ರೀತಿಯಲ್ಲಿ ಹಿಂಸೆ ನೀಡಲಾಗಿದೆ ಮತ್ತು 16 ದಿವಸಗಳ ಕಾಲ ಕಾನೂನಿಬಾಹಿರವಾಗಿ ಬಂಧನದಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ ತಾನು ಚಲಿಸಿಹೋದೆ. ನಿಮಗೂ ಇದೇ ಅನುಭವವಾಗಿರಬಹುದು" ಎಂದು ಆಡ್ವಾಣಿ ಪ್ರಧಾನಿಯವರೊಂದಿಗೆ ಮಾತನಾಡಿರುವ ವೇಳೆ ಹೇಳಿದ್ದಾರೆ.

ಇದೇವೇಳೆ ಅವರು ಹಿಂದೂ ಭಯೋತ್ಪಾನೆ ಎಂಬ ಶಬ್ದವನ್ನು ಬಳಸಿರುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ನಾವು ಎಂದಿಗೂ ಮುಸ್ಲಿಂ ಭಯೋತ್ಪಾನೆ ಅಥವಾ ಸಿಖ್ ಭಯೋತ್ಪಾನೆ ಎಂದು ಹೇಳಿಲ್ಲ. ಹಾಗಿರುವಾಗ ಮಾಲೆಗಾಂವ್ ಸ್ಫೋಟಕ್ಕೆ ಮಾತ್ರ ಯಾಕೆ ಹಿಂದೂ ಭಯೋತ್ಪಾನೆ ಎಂಬ ವಿವರಣೆ ಎಂಬುದಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಭಯೋತ್ಪಾಕನೊಬ್ಬ ಭಯೋತ್ಪಾದಕ. ಆತನಿಗೆ ಧರ್ಮವಿಲ್ಲ. ಆತನೊಬ್ಬ ಕ್ರಿಮಿನಲ್ ಆಗಿರುವ ಕಾರಣ ಅಂತೆಯೇ ಅವರನ್ನು ಪರಿಗಣಿಸಬೇಕು ಎಂದೂ ಆಡ್ವಾಣಿ ಮಾತುಕತೆಯ ವೇಳೆ ಹೇಳಿದ್ದಾರೆನ್ನಲಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಎಸ್‌ಯು ನೌಕರರ ವೇತನ ಪರಿಷ್ಕರಣೆ
ಸಾಧ್ವಿ, ಪಾಂಡೆ, ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ವಿಡಿಯೋ
ಎಟಿಎಸ್ ವಿರುದ್ಧ ದಾವೆ ಹೂಡಿದ ಶಿವಸೇನೆ
ಆಡ್ವಾಣಿ ಪಾಟೀಲರಷ್ಟೆ ದುರ್ಬಲರಾಗಿದ್ದರು: ಗೋವಿಂದಾಚಾರ್ಯ
ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ
ವಿಚ್ಛೇದಿತ ಪತ್ನಿಯ ವೈದ್ಯಕೀಯ ವೆಚ್ಚಕ್ಕೆ ಪತಿ ಬಾಧ್ಯ