ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಲೇಂಗೆ ಸಂಗಾತಿಯಿಲ್ಲದ 'ವಿವಾಹ' ವಾರ್ಷಿಕೋತ್ಸವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಲೇಂಗೆ ಸಂಗಾತಿಯಿಲ್ಲದ 'ವಿವಾಹ' ವಾರ್ಷಿಕೋತ್ಸವ
ಭೂಗತ ಪಾತಕಿ ಅಬು ಸಲೇಂ ಗುರುವಾರ ಆರ್ಥರ್ ರೋಡ್ ಜೈಲಿನಲ್ಲಿ ವಿಶೇಷ ಉತ್ಸಾಹದಿಂದಿದ್ದ. ಇದಕ್ಕೆ ಕಾರಣ ಗುರುವಾರ ಆತ ಮತ್ತು ನಟಿ ಮೋನಿಕಾ ಬೇಡಿಯ 'ವಿವಾಹ'ದ 8ನೇ ವಾರ್ಷಿಕೋತ್ಸವವಾಗಿತ್ತು. ಆದರೆ ಮೋನಿಕಾ ವಿವಾಹ ಕುರಿತ ವರದಿಗಳನ್ನು ಈಗಾಗಲೇ ನಿರಾಕರಿಸಿದ್ದಾಳೆ.

1993ರ ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು, ಭಾರತಕ್ಕೆ ಗಡೀಪಾರಾಗಿದ್ದ ಗ್ಯಾಂಗ್‌ಸ್ಟರ್ ಅಬು ಸಲೇಂನ ವಿವಾಹ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗಿದ್ದು ಅವರ ವಕೀಲ ರಾಜಾ ಠಾಕೂರ್ ಮಾತ್ರ.

2001ರಿಂದೀಚೆಗೆ ಮೋನಿಕಾ ಬೇಡಿ ತನಗೆ ಬರೆದ ಪತ್ರಗಳು, ಶುಭಾಶಯ ಪತ್ರಗಳನ್ನು ಜೈಲಿನಲ್ಲಿದ್ದುಕೊಂಡು ಓದುತ್ತಲೇ ಇದ್ದಾನೆ ಸಲೇಂ. ಈಗ ಆತನನ್ನು 'ಒಂಟಿತನ' ಕಾಡುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.

'ಸಲೇಂ ಜತೆಗಿನ ಮದುವೆಯನ್ನು ಮೋನಿಕಾ ನಿರಾಕರಿಸುತ್ತಿದ್ದರೂ, 2000ರ ನವೆಂಬರ್ ತಿಂಗಳಲ್ಲಿ ಲಾಸ್ ಏಂಜಲೀಸ್‌ನ ಮಸೀದಿಯೊಂದರಲ್ಲಿ ಇಬ್ಬರೂ ವಿವಾಹವಾಗಿರುವುದಾಗಿ ಸಲೇಂ ಹೇಳುತ್ತಿದ್ದಾರೆ' ಎಂದು ಠಾಕೂರ್ ವಿವರಿಸಿದ್ದಾರೆ.

ಮೋನಿಕಾ ಎಷ್ಟೇ ನಿರಾಕರಿಸುತ್ತಿರಲಿ, ಡಾನ್ ಸಲೇಂ ತನ್ನ ಎಂಟನೇ ವೈವಾಹಿಕ ವಾರ್ಷಿಕೋತ್ಸವವನ್ನು ಸಂಗಾತಿಯಿಲ್ಲದ ವಿಶೇಷ ದಿನವಾಗಿ ಆಚರಿಸಿಕೊಂಡಿದ್ದಾನೆ. ಸಲೇಂ ತನಗೆ ಚೆನ್ನಾಗಿ ಗೊತ್ತಿದೆ, ಆತ ಗೆಳೆಯನೂ ಹೌದು. ಆದರೆ ತಾವೆಂದಿಗೂ ಮದುವೆಯಾಗಿಲ್ಲ ಎಂದು ಮೋನಿಕಾ ಹಲವು ಸಂದರ್ಶನಗಳಲ್ಲಿ, ಮಾಧ್ಯಮಗಳೆದುರು ಹೇಳುತ್ತಲೇ ಬಂದಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
ಪಿಎಸ್‌ಯು ನೌಕರರ ವೇತನ ಪರಿಷ್ಕರಣೆ
ಸಾಧ್ವಿ, ಪಾಂಡೆ, ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ವಿಡಿಯೋ
ಎಟಿಎಸ್ ವಿರುದ್ಧ ದಾವೆ ಹೂಡಿದ ಶಿವಸೇನೆ
ಆಡ್ವಾಣಿ ಪಾಟೀಲರಷ್ಟೆ ದುರ್ಬಲರಾಗಿದ್ದರು: ಗೋವಿಂದಾಚಾರ್ಯ
ಸಾಂಬಾದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ