ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
ಮಾಲೆಗಾಂವ್ ಸ್ಫೋಟ ಪ್ರಕಣವೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ವಿವಿಧ ರಾಜಕೀಯ ನಾಯಕರ ನಡುವೆ ಹೇಳಿಕಾ ಸಮರ ನಡೆಯುತ್ತಿದೆ.

ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತರು ಆರೆಸ್ಸೆಸ್ ನಾಯಕರ ಹತ್ಯೆಗೆ ಸಂಚು ಹೂಡಿದ್ದರು ಎಂಬುದಾಗಿ ಪ್ರಕಣದ ತನಿಖೆ ನಡೆಸುತ್ತಿರುವ ಎಟಿಎಸ್ ವರದಿ ಹೇಳಿದೆ. ಬಂಧಿತ ದಯಾನಂದ ಪಾಂಡೆಯ ಲ್ಯಾಪ್‌ಟಾಪ್‌ನಿಂದ ಈ ಮಾಹಿತಿ ಲಭಿಸಿದೆ ಎಂದು ಅದು ತಿಳಿಸಿದೆ.

ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಭಾಗ್ವತ್ ಅವರ ಹತ್ಯೆಗೆ ಬಂಧಿತರು ಸಂಚು ಹೂಡಿದ್ದರು ಎಂದು ಎಟಿಎಸ್ ಹೇಳಿದೆ.

ಮೊಯ್ಲಿ ಟೀಕೆ
ಬಂಧಿತ ಸಾಧ್ವಿ ಪ್ರಗ್ಯಾಸಿಂಗ್ ನೆರವಿಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಧಾವಿಸಿರುವ ಕ್ರಮವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಆಡ್ವಾಣಿಯಂತಹ ಜವಾಬ್ದಾರಿಯುತ ಹಿರಿಯ ನಾಯಕರು ಎಟಿಎಸ್ ತನಿಖೆಯನ್ನು ಧೃತಿಗೆಡಿಸಬಾರದು ಎಂದು ಹೇಳಿದ್ದಾರೆ.

ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಅಂತಃಕಲಹ ನಡೆಯುತ್ತಿದೆ ಎಂದೂ ಮೊಯ್ಲಿ ಟೀಕಿಸಿದ್ದಾರೆ.

ಹಿಂದೂಗಳನ್ನು ಒಡೆಯುವ ತಂತ್ರ
ಆರೆಸ್ಸೆಸ್ ನಾಯಕರ ಹತ್ಯೆಗೆ ಸ್ಫೋಟ ಶಂಕಿತರು ಸಂಚುಹೂಡಿದ್ದರು ಎಂಬ ಎಟಿಎಸ್ ವರದಿಗೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್ ಇದು ಹಿಂದೂಗಳನ್ನು ಒಡೆಯುವ ತಂತ್ರವಲ್ಲದೆ ಮತ್ತೇನಲ್ಲ ಎಂದು ಹೇಳಿದೆ.

ಹಿಂದೂ ಧಾರ್ಮಿಕ ನಾಯಕರನ್ನು ಬಂಧಿಸಿರುವುದು ಎಟಿಎಸ್ ಮತ್ತು ರಾಷ್ಟ್ರಕ್ಕೆ ನಾಚಿಕೆಗೇಡಿನ ವಿಚಾರ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಪ್ರತಿಕ್ರಿಯಿಸಿದ್ದಾರೆ.

ಪಾಂಡೆಗೆ ನಾರ್ಕೋ ಪರೀಕ್ಷೆ
ಏತನ್ಮಧ್ಯೆ, ಸ್ಫೋಟ ಶಂಕಿತ, ಎಟಿಎಸ್ ವಶದಲ್ಲಿರುವ ಸ್ವಯಂಘೋಷಿತ ಸ್ವಾಮಿ ದಯಾನಂದ ಪಾಂಡೆ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಜರಾತಿನಲ್ಲಿ ಬಿಜೆಪಿ-ವಿಹಿಂಪ ಕದನ ತೀವ್ರ
ಮಾರನ್ ಸಹೋದರರಿಗೆ ಕರುಣಾ ತರಾಟೆ
ನಾಲ್ವರು ಬಿಎನ್‌ಸಿಟಿ ಉಗ್ರರ ಶರಣಾಗತಿ
ಮಾಲೆಗಾಂವ್ ಸ್ಫೋಟಶಂಕಿತರ ವಿರುದ್ಧ ಮೋಕಾ
ಸಲೇಂಗೆ ಸಂಗಾತಿಯಿಲ್ಲದ 'ವಿವಾಹ' ವಾರ್ಷಿಕೋತ್ಸವ
ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್