ನವದೆಹಲಿ: ಮಹಾರಾಷ್ಟ್ರಾದಲ್ಲಿರುವ ಉತ್ತರಭಾರತೀಯರ ವಿರುದ್ಧ ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಹ ಹೇಳಿಕೆಗಳನ್ನುನೀಡಿರುವ ಎಂಎನ್ಎಸ್ ಮುಖ್ಯಸ್ಥ ರಾಜ್‌ಠಾಕ್ರೆಯವರ ವಿರುದ್ಧ ಮೋಕಾ ಕಾಯ್ದೆಯನ್ನು ಹೇರುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಮುಖ್ಯನ್ಯಾಯಾಧೀಶ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ನ್ಯಾಯಾಪೀಠವು "ನಿರ್ದಿಷ್ಟ ಕಾನೂನಿನಡಿ ನಿರ್ದಿಷ್ಟ ವ್ಯಕ್ತಿಯನ್ನು ಬಂಧಿಸುವಂತೆ ಪೊಲೀಸರಿಗೆ ಹೇಳುವುದು ಈ ನ್ಯಾಯಾಲಯದ ಕೆಲಸವೇ? ಇಂತಹ ಅರ್ಜಿಗಳನ್ನು ಈ ನ್ಯಾಯಾಲಯವು ಪರಿಗಣಿಸಬೇಕೇ?" ಎಂದು ಅರ್ಜಿದಾರರ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿದೆ.
ಯುವಶಕ್ತಿ ಎಂಬ ಎನ್‌ಜಿಒ ಈ ಅರ್ಜಿಯನ್ನು ಸಲ್ಲಿಸಿದ್ದು, ಠಾಕ್ರೆಯ ವಿಭಜಕ ರಾಜಕೀಯವು ರಾಷ್ಟ್ರೀಯ ಐಕ್ಯತೆ ಮತ್ತು ಭದ್ರತೆಗೆ ಭೀತಿಯೊಡ್ಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಅರ್ಜಿಯನ್ನು ವಜಾ ಮಾಡುವ ಕಾರಣ ಅರ್ಜಿಯನ್ನು ವಾಪಾಸು ಪಡೆಯಲು ವಕೀಲರಿಗೆ ನ್ಯಾಯಾಲಯ ಅನುಮತಿ ನೀಡಿತು. |