ಭ್ರಷ್ಟಾಚಾರ ಆರೋಪವನ್ನೆದುರಿಸುತ್ತಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರ ವಿರುದ್ಧ ಕೋರ್ಟ್ ಮಾರ್ಶಲ್ ಪ್ರಕ್ರಿಯೆ ನಡೆಸಲು ಸೇನೆ ಶುಕ್ರವಾರ ನಿರ್ಧರಿಸಿದ್ದು, ಚರಿತ್ರೆಯಲ್ಲೇ ಸೇನೆಯು ಇಂತಹ ಕ್ರಮಕ್ಕೆ ಮುಂದಾಗಿರುವುದು ಇದು ಪ್ರಥಮವಾಗಿದೆ.
ಲೆಫ್ಟಿನೆಂಟ್ ಜನರಲ್(ನಿವೃತ್ತ) ಎಸ್.ಕೆ.ಸಾಹ್ನಿ ಅವರು ಸೇನಾ ಕಾಯ್ದೆಗಳಡಿ ಇಂತಹ ಪ್ರಕ್ರಿಯೆಯನ್ನು ಎದುರಿಸುತ್ತಿರುವ (ಸೇವೆಯಲ್ಲಿರುವ ಅಥವಾ ನಿವೃತ್ತ) ಅತ್ಯಂತ ಹಿರಿಯ ಸೇನಾಧಿಕಾರಿಯಾಗಲಿದ್ದಾರೆ.
ಜಲಂದರ್‌ನಲ್ಲಿರುವ ಮುಖ್ಯಕಚೇರಿಯಲ್ಲಿ ನವೆಂಬರ್ 26ರಂದು ನಡೆಯಲಿರುವ ಈ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಹಿರಿಯ ಲೆಫ್ಟಿನೆಂಟ್ ಜನರಲ್ ಒಬ್ಬರು ವಹಿಸಲಿದ್ದಾರೆ.
ಕೋರ್ಟ್ ಮಾರ್ಶಲ್ ಪ್ರಕ್ರಿಯೆ ಎದುರಿಸಲಿರುವ ಸೇನಾಧಿಕಾರಿ ಅವರು ಸೇನಾ ಮುಖ್ಯಕಚೇರಿಯಲ್ಲಿ ಪ್ರಧಾನ ನಿರ್ದೇಶಕರಾಗಿ(ಪೂರೈಕೆ ಮತ್ತು ಸಾರಿಗೆ) ಸೇವೆಸಲ್ಲಿಸುತ್ತಿದ್ದು, 2006ರಲ್ಲಿ ನಿವೃತ್ತರಾಗಿದ್ದರು. ರಾಷ್ಟ್ರಾದ್ಯಂತ ಸೇವೆಸಲ್ಲಿಸುತ್ತಿರು ಪಡೆಗಳಿಗೆ ಪೂರೈಕೆಯ ಜವಾಬ್ದಾರಿ ವಹಿಸಿದ್ದರು.
|