ಮುಂಬೈ: ತನ್ನನ್ನು ಮುಂಬೈ ಎಟಿಎಸ್ ಎನ್‌ಕೌಂಟರ್‌ನಲ್ಲಿ ಕೊಲ್ಲುವ ಬೆದರಿಕೆ ಹಾಕಿತ್ತು ಮತ್ತು ಬಲವಂತದಿಂದ ತಪ್ಪೊಪ್ಪಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಮಾಲೆಗಾಂವ್ ಸ್ಫೋಟದ ಪ್ರಧಾನ ಆರೋಪಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.
ಪುಣೆಯಲ್ಲಿ ಜಮ್ಮು ಕಾಶ್ಮೀರದ ಮಿಲಿಂದ್ ದಾತೆ ಎಂಬಾತನಿಗೆ ಬಂದೂಕು ಪರವಾನಿಗೆ ಫೊರ್ಜರಿ ಮಾಡಲಾಗಿರುವ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಶಪಡಿಸಲಾಗಿರುವ ಪುರೋಹಿತ್, ನ್ಯಾಯಾಲಯದಲ್ಲಿ ಕುಳಿತು ತನ್ನ ನೋವುಗಳನ್ನು ಕಾಗದಕ್ಕಿಳಿಸಿದರು. ನ್ಯಾಯಾಧೀಶರು ಏನಾದರೂ ದೂರುಗಳಿವೆಯೇ ಎಂದು ಕೇಳಿದ ವೇಳೆಗೆ ಪುರೋಹಿತ್ ಎಟಿಎಸ್ ತನಗೆ ಹಿಂಸೆ ನೀಡಿದೆ ಎಂದು ಬರಹದ ಮೂಲಕ ದೂರಿದರು.
"ಪುಣೆ ಪೊಲೀಸರ ಮೇಲೆ ತನಗೆ ಯಾವುದೇ ದೂರುಗಳಿಲ್ಲ. ಆದರೆ ನನ್ನ ನೋವುಗಳನ್ನು ಲಿಖಿತವಾಗಿ ಸಲ್ಲಿಸಲು ತಾನು ಇಚ್ಚಿಸುವುದಾಗಿ ಅವರು ನುಡಿದರು. ಮುಕ್ತ ನ್ಯಾಯಾಲಯದಲ್ಲಿ ಮೌಕಿಕ ಹೇಳಿಕೆ ನೀಡಲು ತನ್ನ ಕಕ್ಷಿದಾರ ಬಯಸುತ್ತಿಲ್ಲ, ಅವರು ಬರೆದು ಕೊಡಲು ಬಯಸುತ್ತಾರೆ ಎಂದು ನುಡಿದರು. ಬಳಿಕ ಪುರೋಹಿತ್ ಅವರ ವಕೀಲ ಶ್ರೀಕಾಂಕ್ ಶಿವ್ಡೆ ಪುರೋಹಿತ್ ಏನು ಬರೆದಿದ್ದಾರೆ ಎಂಬ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದರು.
|