ತಮ್ಮ ತಾತ ಕರುಣಾನಿಧಿ ಮಾಡಿರುವ ಆರೋಪಗಳಿಗೆ ಅವರ ಕುಟುಂಬದೊಳಗಿನ 'ಸ್ವಾರ್ಥಿಗಳ ಪ್ರೇರಣೆ' ಕಾರಣ ಎಂದು ಮಾರನ್ ಸಹೋದರುಗಳಾದ ಕಲಾನಿಧಿ ಮತ್ತು ದಯಾನಿಧಿ ಅವರುಗಳು ಕರುಣಾನಿಧಿ ಅರೋಪಗಳಿಗೆ ನೀಡಿರುವ ಪ್ರತ್ಯುತ್ತರದಲ್ಲಿ ಹೇಳಿದ್ದಾರೆ.
ಕರುಣಾನಿಧಿಯವರ ಆರೋಪಗಳಿಗೆ ನಿರಂತರ ಮೌನ ಪ್ರತಿಕ್ರಿಯೆಯು ಅವರ ಆರೋಪಗಳನ್ನು ಸ್ವೀಕರಿಸುವಂತಾಗುವ ಕಾರಣ ಇದಕ್ಕೆ ಉತ್ತರಿಸಹಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್, ಕರುಣಾನಿಧಿ ಅವರು ಡಿಎಂಕೆಯ ಮುಖವಾಣಿ ಮುರಸೋಳಿಯಲ್ಲಿ ಮಾಡಿರುವ ಆರೋಪಗಳಿಗೆ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ್ದಾರೆ.
ಕರುಣಾನಿಧಿ ಆರೋಪಗಳಿಗೆ 12 ಪುಟಗಳ ಪ್ರತಿಕ್ರಿಯೆ ನೀಡಿರುವ ಮಾರನ್ ತಮ್ಮ ಸಮಗ್ರತೆ, ಪ್ರಾಮಾಣಿಕತೆ ಮತ್ತು ಕೊಡುಗೆ(ಪಕ್ಷ ಮತ್ತು ಕುಟುಂಬಕ್ಕೆ)ಯನ್ನು ಪ್ರಶ್ನಿಸಿರುವ ಕಾರಣ ಈ ಉತ್ತರ ನೀಡಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಹೇಳಿದ್ದಾರೆ.
ದಯಾನಿಧಿಯವರು ತನ್ನ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಡಿಎಂಕೆ ಮುಖ್ಯಸ್ಥರು ಬಯಸುತ್ತಾರೆಂದಾದರೆ ತನ್ನ ಸಹೋದರ ದಯಾನಿಧಿ ಸಂತೋಷವಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು ಎಂದೂ ಹೇಳಿದ್ದಾರೆ.
ಕರುಣಾನಿಧಿಯವರು ತನ್ನ ಬರಹದಲ್ಲಿ, ಮಾರನ್ ಸಹೋದರರು ತನ್ನ ಕುಟುಂಬ ಮತ್ತು ಪಕ್ಷದೊಳಗೆ ಒಡಕುಂಟು ಮಾಡಲು ಬಯಸುತ್ತಿದ್ದಾರೆ ಎಂದು ದೂರಿದ್ದರು. |