ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಬಂಧಿತ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್‌ನ ಲ್ಯಾಪ್‌ಟಾಪ್ ಕಂಪ್ಯೂಟರನ್ನು ಜಾಲಾಡಿದ ಪೊಲೀಸರಿಗೆ, ಆತ ಮುಸ್ಲಿಂ-ವಿರೋಧೀ ವೆಬ್‌ಸೈಟುಗಳಿಗೆ ಪದೇ ಪದೇ ಭೇಟಿ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆಯಾದರೂ, ಸಂಚಿನ ಕುರಿತಾದ ಯಾವುದೇ ಆಧಾರಗಳು ಲಭ್ಯವಾಗಿಲ್ಲ.

ಪುರೋಹಿತ್ ಬಂಧನವಾದ ಒಂದು ವಾರದ ಬಳಿಕ ಸೇನೆಯು ಈ ಲ್ಯಾಪ್‌ಟಾಪನ್ನು ಎಟಿಎಸ್ ತನಿಖಾ ತಂಡಕ್ಕೆ ಹಸ್ತಾಂತರಿಸಿತ್ತು. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗಿದ್ದು, ಆಗಾಗ್ಗೆ ಮುಸ್ಲಿಂ-ವಿರೋಧಿ ಮತ್ತು ಜೆಹಾದಿ ವೆಬ್‌ಸೈಟ್‌ಗಳನ್ನು ಆತ ಸಂದರ್ಶಿಸುತ್ತಿದ್ದ ಕುರಿತು ಮಾಹಿತಿಯಷ್ಟೇ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಸೆಪ್ಟೆಂಬರ್ 29ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಭಿನವ ಭಾರತ್ ಸಂಘಟನೆಯ ಕುರಿತು ಎಟಿಎಸ್‌ಗೆ ಹೆಚ್ಚಿನ ಸುಳಿವುಗಳೇನೂ ಅದರಿಂದ ದೊರೆಯಲಿಲ್ಲ. ಹೀಗಾಗಿ ಕಂಪ್ಯೂಟರನ್ನು ಟ್ಯಾಂಪರ್ ಮಾಡಲಾಗಿದೆಯೇ ಎಂಬ ಕುರಿತು ಸಂದೇಹವೊಂದು ಹುಟ್ಟಿಕೊಂಡಿದೆ.

ಲೆ.ಕ. ಪುರೋಹಿತ್ ಅವರು ಭಾಷಾ ಕೋರ್ಸ್ ಮಾಡುತ್ತಿದ್ದ ಮದ್ಯಪ್ರದೇಶದ ಪಂಚಮಡಿಯಿಂದ ಈ ಲ್ಯಾಪ್‌ಟಾಪನ್ನು ಸೇನೆಯು ಸ್ಥಾನಾಂತರ ಮಾಡಿದ್ದೇಕೆ ಎಂಬುದು ಪೊಲೀಸರ ಶಂಕೆಗೆ ಕಾರಣ. ಈ ಬಗ್ಗೆ ಸೇನೆಯು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಪುರೋಹಿತ್ ಅವರು ಸೇನಾ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಈ ಲ್ಯಾಪ್‌ಟಾಪ್‌ನಲ್ಲಿ ದೇಶದ ಭದ್ರತೆಗೆ ತೊಡಕಾಗುವ ಯಾವುದೇ ಮಾಹಿತಿಗಳಿವೆಯೇ ಎಂದು ಅರಿತುಕೊಳ್ಳಲು ಅಧಿಕಾರಿಗಳು ನೋಡಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರುಣಾನಿಧಿ ಆರೋಪಗಳಿಗೆ 'ಸ್ವಾರ್ಥಿಗಳ' ಪ್ರೇರಣೆ
ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
ಎಟಿಎಸ್ ಕೊಲ್ಲುವ ಬೆದರಿಕೆ ಹಾಕಿತ್ತು: ಪುರೋಹಿತ್
ತನಗೂ ಪ್ರಧಾನಿಯಾಗುವ ಆಸೆ ಇದೆ: ಲಾಲೂ
ನಿವೃತ್ತ ಲೆಫ್ಟಿನೆಂಟ್ ವಿರುದ್ಧ ಕೋರ್ಟ್‌ಮಾರ್ಶಲ್