ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಶನಿವಾರ ಭದ್ರತಾಪಡೆಗಳು ಮತ್ತು ಚುನಾವಣಾ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬ ಸೇರಿದಂತೆ ಯುವಕರಿಬ್ಬರು ಮೃತರಾಗಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಗುಂಡು ಹಾರಿಸಿದ್ದು, ಖಾನ್‌ಪೋರಾದ ನಿವಾಸಿಯೊಬ್ಬ ಸೇರಿದಂತೆ ಯುವಕರಿಬ್ಬರು ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ.
ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾಗಿದ್ದು ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿ ಈಗಾಗಲೇ ಪ್ರಥಮ ಹಂತದ ಚುನಾವಣೆ ಪೂರ್ಣಗೊಂಡಿದ್ದು, ಭಾನುವಾರ ದ್ವಿತೀಯ ಹಂತದ ಚುನಾವಣೆ ನಡೆಯಲಿದ್ದು ಕಣಿವೆ ರಾಜ್ಯ ಉದ್ವಿಗ್ನವಾಗಿದೆ. |