ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳ ಸ್ವರೂಪ ಬದಲಾಗುತ್ತಿದ್ದು, ಉಗ್ರವಾದಿ ಸಂಘಟನೆಗಳು ಅಣುವಸ್ತುಗಳು, ಜೈವಿಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಬಹುದು ಎಂಬ ಎಚ್ಚರಿಕೆ ನೀಡಿರುವ ಸರಕಾರ ಇದನ್ನು ಎದುರಿಸಲು ವಿವಿಧ ಕೋನಗಳ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದೆ.

ಉಗ್ರರು ಸೇನಾ ಮಾದರಿಗಳನ್ನು ಬಳಸಲು ಆರಂಭಿಸಿದ್ದಾರೆ. ಅವರು ಅತ್ಯಾಧುನಿಕ ಆಯುಧಗಳು ಮತ್ತು ಸ್ಫೋಟಕಗಳನ್ನು ಬಳಸುತ್ತಿದ್ದಾರೆ ಎಂದು ಗೃಹಸಚಿವ ಶಿವರಾಜ್ ಪಾಟೀಲ್ ಹೇಳಿದ್ದಾರೆ.

ಗುಪ್ತಚರದಳ ಆಯೋಜಿಸಿರುವ ಡಿಜಿಗಳು ಮತ್ತು ಐಜಿಗಳ ಎರಡು ದಿನದ ಸಮ್ಮೇಳನವನ್ನು ಉದ್ಘಾಸುತ್ತಾ ಪಾಟೀಲ್ ಮಾತನಾಡುತ್ತಿದ್ದರು.

ಉನ್ಮತ್ತತೆಯ ಭಯ ಹುಟ್ಟಿಸುವ ನಿಟ್ಟಿನಲ್ಲಿ ಉಗ್ರರು ದೊಡ್ಡಮಟ್ಟದ ಮತ್ತು ಸಂಕೀರ್ಣ ಸ್ವರೂಪದ ಹಿಂಸಾಚಾರ ಉಂಟುಮಾಡುವಂತಹ ಸ್ಥಳಗಳನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ನುಡಿದ ಅವರು, ಇದಕ್ಕಾಗಿ ಧಾರ್ಮಿಕ ಸ್ಥಳಗಳನ್ನು ಆರಿಸಿಕೊಳ್ಳುತ್ತಿದ್ದು ಈ ಮೂಲಕ ವಿವಿಧ ಧರ್ಮಗಳು ಮತ್ತು ಸಮುದಾಯಗಳ ನಡುವೆ ಬಿಕ್ಕಟ್ಟನ್ನು ಹುಟ್ಟುಹಾಕುತ್ತಿವೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ
ಚೋಟಾಶಕೀಲ್ ಸಹೋದರ ಅನ್ವರ್ ಬಂಧನ
ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
ಕರುಣಾನಿಧಿ ಆರೋಪಗಳಿಗೆ 'ಸ್ವಾರ್ಥಿಗಳ' ಪ್ರೇರಣೆ
ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?