ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಭಯೋತ್ಪಾದನೆ ಮಟ್ಟ ಹಾಕಲು ವಿಶೇಷ ಪಡೆಗಳನ್ನು ಬಲಪಡಿಸುವಂತೆ ರಾಜ್ಯಗಳಿಗೆ ಕರೆ ನೀಡಿರುವ ಕೇಂದ್ರ ಸರಕಾರ, ದೇಶಾದ್ಯಂತ ಕಬಂಧಬಾಹು ಚಾಚುತ್ತಿರುವ ಉಗ್ರವಾದ ಮಟ್ಟ ಹಾಕಲು ಪೋಟಾ ಮಾದರಿಯ ಕಠಿಣ ಕಾನೂನು ಜಾರಿಗೊಳಿಸುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಎರಡು ದಿನಗಳ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ವಿಶೇಷ ಪಡೆಗಳನ್ನು ರಚಿಸಿ ಅವುಗಳನ್ನು ಬಲಪಡಿಸುವುದು ಸದ್ಯದ ಅಗತ್ಯ ಎಂದು ಹೇಳಿದರು.

ಕೇಂದ್ರ ಗುಪ್ತಚರ ಇಲಾಖೆ ಸಂಘಟಿಸಿರುವ ವಾರ್ಷಿಕ ಪೊಲೀಸ್ ಮಹಾನಿರ್ದೇಶಕರು ಹಾಗೂ ಐಜಿಪಿಗಳ ಸಮಾವೇಶದಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ , ಅರೆಸೇನಾ ಪಡೆಗಳು ಹಾಗೂ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ. ಉಗ್ರಗಾಮಿ ಮತ್ತು ಮೂಲಭೂತವಾದಿ ಗುಂಪುಗಳಿಂದ ಉದ್ಭವವಾಗುವ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಜಂಟಿ ಕಾರ್ಯತಂತ್ರವೊಂದನ್ನು ರೂಪಿಸಲು ಈ ಸಮಾವೇಶವು ಶ್ರಮಿಸಲಿದೆ.

ಹಿಂದೂ ಮತ್ತು ಇಸ್ಲಾಮಿಕ್ ಕಠೋರವಾದಿಗಳಿಂದ ಉದ್ಭವಿಸಿರುವ ಬೆದರಿಕೆ, ಉಗ್ರಗಾಮಿಗಳಿಗೆ ದೊರೆಯುವ ಬಾಹ್ಯ ಬೆಂಬಲದ ಬಗ್ಗೆ ಹಾಗೂ ಸರಣಿ ಬಾಂಬ್ ಸ್ಫೋಟಗಳಂತಹ ಘಟನಾವಳಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಗುಪ್ತಚರ ದಳಗಳ ಮಾಹಿತಿ ಸಂಗ್ರಹಣೆಯಲ್ಲಿನ ಬಲವರ್ಧನೆ ಕುರಿತು ಪೊಲೀಸ್ ಮುಖ್ಯಸ್ಥರು ಚರ್ಚಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾನುವಾರ ಈ ಸಮಾವೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಾಗವಹಿಸಲಿದ್ದಾರೆ. ಚರ್ಚೆಯ ಸಂದರ್ಭ ಮಾಲೆಗಾಂವ್ ಸ್ಫೋಟ ಪ್ರಕರಣಗಳ ತನಿಖೆಯ ಬೆಳವಣಿಗೆಗಳು ಹಾಗೂ ಇತ್ತೀಚೆಗೆ ಒರಿಸ್ಸಾ, ಕರ್ನಾಟಕ ಮತ್ತು ಕೇರಳಗಳಲ್ಲಿ ಚರ್ಚುಗಳ ಮೇಲೆ ನಡೆದ ದಾಳಿ ಪ್ರಕರಣಗಳೂ ಚರ್ಚೆಯಾಗುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ
ಚೋಟಾಶಕೀಲ್ ಸಹೋದರ ಅನ್ವರ್ ಬಂಧನ
ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
ಕರುಣಾನಿಧಿ ಆರೋಪಗಳಿಗೆ 'ಸ್ವಾರ್ಥಿಗಳ' ಪ್ರೇರಣೆ
ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ