ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಬೆಸ್ಟ್ ಬಸ್ ಪ್ರಕರಣದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ರಾಹುಲ್ ರಾಜ್‌ಗೆ ಸಮೀಪದಿಂದ ಗುಂಡು ಹಾರಿಸಿಲ್ಲ, ಕನಿಷ್ಠ ನಾಲ್ಕು ಮೀಟರ್ ಅಂತರದಿಂದ ಗುಂಡು ಹಾರಿಸಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.

ಆದರೆ ಇದಕ್ಕೂ ಮೊದಲು, ಆತನಿಗೆ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದ್ದು, ಪ್ರಕರಣ ಇದೀಗ ಯು ಟರ್ನ್ ಪಡೆದುಕೊಂಡಿದೆ.

ರಾಜ್‌ಗೆ ನಾಲ್ಕು ಮೀಟರ್ ಅಂತರದಿಂದ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ನಗರ ಪೊಲೀಸ್‌ಗೆ ಶನಿವಾರ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಇದಕ್ಕೂ ಮೊದಲು ರಾಜ್ ಪರೀಕ್ಷೆ ನಡೆಸಿದ್ದ ವೈದ್ಯರೋರ್ವರು, ಆತನಿಗೆ ತಗುಲಿದ ಬುಲೆಟ್‌ಗಳಲ್ಲಿ ಒಂದು ಅತ್ಯಂತ ಸಮೀಪದಿಂದ ಹಾರಿರಬಹುದು ಎಂದು ಶಂಕಿಸಿದ್ದರು.

ಆ ನಿಟ್ಟಿನಲ್ಲಿ ಈ ವರದಿ ಯು ಟರ್ನ್ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಂತಹ ಯಾವುದೇ ಕಪ್ಪು ಛಾಯೆಗಳು ಮೂಡಿ ಬಂದಿಲ್ಲ ಎಂದು ಹೇಳಲಾಗಿದೆ.

ಅಕ್ಟೋಬರ್ 27ರಂದು ಮುಂಬೈನ ಕುರ್ಲಾ ಉಪನಗರದಲ್ಲಿ 12 ಪ್ರಯಾಣಿಕರಿದ್ದ ಬಸ್ಸೊಂದರಲ್ಲಿ ಪಿಸ್ತೂಲ್ ಹಿಡಿದು ಝಳಪಿಳಿಸಿದ್ದ ಪಾಟ್ನಾ ಮೂಲದ ರಾಜ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ವಿವಾದಕ್ಕೆ ಒಳಗಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ
ಚೋಟಾಶಕೀಲ್ ಸಹೋದರ ಅನ್ವರ್ ಬಂಧನ
ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
ಕರುಣಾನಿಧಿ ಆರೋಪಗಳಿಗೆ 'ಸ್ವಾರ್ಥಿಗಳ' ಪ್ರೇರಣೆ