ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚುನಾವಣಾ ಪೂರ್ವ ಹೊಂದಾಣಿಕೆ ಅಗತ್ಯ: ಸಿಪಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಪೂರ್ವ ಹೊಂದಾಣಿಕೆ ಅಗತ್ಯ: ಸಿಪಿಐ
ಮುಂದಿನ ಸಾರ್ವತ್ರಿಕ ಚುನಾವಣೆ ದೇಶದಲ್ಲಿನ ಅತ್ಯಂತ ನಿರ್ಣಾಯಕ ಚುನಾವಣೆಯಾಗಲಿರುವುದು ಎಂಬುದಾಗಿ ಸಿಪಿಐ ಪ್ರಧಾನ ಕಾರ್ಯದರ್ಶಿ ಎಬಿ ಬರ್ಧನ್ ಅಭಿಪ್ರಾಯ ಪಟ್ಟಿದ್ದಾರೆ.

ಸಿಪಿಐ ರಾಜ್ಯ ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬರ್ಧನ್, ಪರ್ಯಾಯ ಎಡ ಪಂಥ-ಪ್ರಜಾಪ್ರಭುತ್ವ ಶಕ್ತಿಗಳ ರಚನೆಗೆ ಎಡ ಪಕ್ಷಗಳು ಒಗ್ಗಟ್ಟಾಗುವ ಅಗತ್ಯತೆಯನ್ನು ಒತ್ತಿ ಹೇಳಿದರು.

ತೆಲುಗು ದೇಶಂ ಪಕ್ಷವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಬರ್ಧನ್ ಕೆಲ ಪಕ್ಷಗಳು ಈ ಹಿಂದೆ ಕೆಲ ತಪ್ಪುಗಳನ್ನು ಮಾಡಿರಬಹುದು. ಆದರೆ ಅವರು ಅದನ್ನು ಅರಿತುಕೊಂಡಿದ್ದಾರೆ ಮತ್ತು ತಮ್ಮಲ್ಲಿ ಕೈ ಜೋಡಿಸಲು ತಿದ್ಧುಪಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣಾ ಉದ್ದೇಶಕ್ಕಾಗಿ ಮಾತ್ರವಲ್ಲದೆ ಸಾರ್ವಜನಿಕ ಅಂಶಗಳ ಮೇಲಿನ ದೀರ್ಘ ಕಾಲೀನ ಬವಣೆಗಳಿಗಾಗಿ ಎಡಪಂಥ-ಪ್ರಜಾಪ್ರಭುತ್ವ ಮೈತ್ರಿಯನ್ನು ರಚಿಸುವಲ್ಲಿ ಎಡಪಕ್ಷಗಳು ಉಪಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಆಂದ್ರಪ್ರದೇಶದಲ್ಲಿ ಎಡಪಕ್ಷಗಳೊಂದಿಗೆ ಕೈ ಜೋಡಿಸುವಲ್ಲಿ ತೆಲುಗು ದೇಶಂ ಪಕ್ಷ ಪ್ರಸಕ್ತ ನಡೆಸುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಬರ್ಧನ್‌ರ ಈ ಹೇಳಿಕೆ ಮಹತ್ವ ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ
ಚೋಟಾಶಕೀಲ್ ಸಹೋದರ ಅನ್ವರ್ ಬಂಧನ
ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್