ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳಗಳನ್ನು ಉನ್ನತ ದರ್ಜೆಗೇರಿಸಿ ಬಲಪಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಎರಡು ದಿನಗಳ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಹೇಳಿದ್ದಾರೆ.

ಮಾಳೆಗಾಂವ ಸ್ಫೋಟ ಕುರಿತಂತೆ ಮಾತನಾಡಿದ ಪ್ರಧಾನಿ, ಪೊಲೀಸರಿಗೆ ಮುಕ್ತವಾಗಿ ತನಿಖೆ ನಡೆಸಲು ಎಲ್ಲಾ ಪಕ್ಷಗಳು ಸಹಕರಿಸಬೇಕು. ಪೊಲೀಸರು ಸತ್ಯಾಂಶ ಕಂಡುಹಿಡಿಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ಸ್ಥಿತಿಯಲ್ಲಿ ಪೊಲೀಸರು ತಮ್ಮ ಹೀನಾಯ ವರ್ತನೆಯಿಂದಾಗಿ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದು, ಪೊಲೀಸರು ಪ್ರಮಾಣಿಕರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರಜನತೆಯಲ್ಲಿ ಭರವಸೆ ಮೂಡಿಸಲು ಸಾಧ್ಯ ಎಂದರು.

ಭದ್ರತಾ ಪಡೆಗಳು ಹಾಗೂ ಪೊಲೀಸರ ಮಧ್ಯೆ ಸಾಮರಸ್ಯವಿದ್ದು, ಅದನ್ನು ಬಲಪಡಿಸುವ ಅಗತ್ಯವಿಲ್ಲ.ದೇಶದ ಹಿತಕ್ಕಾಗಿ ದುಡಿಯಲು ಕಂಕಣಬದ್ದರಾಗಿದ್ದಾರೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.

ದೇಶದಲ್ಲಿ ಹರಡುತ್ತಿರುವ ಕೋಮವಾದ ಜ್ವಾಲೆ ನಿಧಾನವಾಗಿ ವಿಸ್ತರಿಸಿ ಜಾತ್ಯಾತೀತತೆಗೆ ಧಕ್ಕೆ ತರುತ್ತಿದ್ದು, ಅದನ್ನು ತಡೆಯುವ ಕಾರ್ಯವಾಗಬೇಕಿದೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮ್ಮು ಕಾಶ್ಮೀರ್: ಎರಡನೇ ಹಂತದ ಮತದಾನ ಆರಂಭ
ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ
ಚೋಟಾಶಕೀಲ್ ಸಹೋದರ ಅನ್ವರ್ ಬಂಧನ