ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಣಿಪುರ್:ಸೇನಾಪಡೆಗಳಿಂದ ಉಗ್ರರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಣಿಪುರ್:ಸೇನಾಪಡೆಗಳಿಂದ ಉಗ್ರರ ಹತ್ಯೆ
ಮಣಿಪುರದ ಎರಡು ಜಿಲ್ಲೆಗಳಲ್ಲಿ ಇಂದು ಭದ್ರತಾ ಪಡೆ ನಡೆಸಿದ ಮ‌ೂರು ಪ್ರತ್ಯೇಕ ಎನ್ಕೌಂಟರ್‌ಗಳಲ್ಲಿ ಏಳು ಉಗ್ರಗಾಮಿಗಳನ್ನು ಹತ್ಯೆಮಾಡಲಾಗಿದೆ ಎಂದು ಮ‌ೂಲಗಳು ತಿಳಿಸಿವೆ.

ಮಯಂಗ್ ಇಂಫಾಲ್ ಚಾರೋಬಂಗ್ ಪ್ರದೇಶದಲ್ಲಿ ಪೊಲೀಸ್ ಸೇನಾತಂಡ ಮತ್ತು ಮರಾಠ ಲೈಟ್ ಇನ್‌ಫೆಂಟ್ರಿ ಸಿಬ್ಬಂದಿಗಳ ತಂಡವು ಎರಡು ಉಗ್ರಗಾಮಿಗಳನ್ನು ಗುಂಡು ಹಾರಿಸಿ ಕೊಂದರು.

ಇನ್ನೊಂದು ಘಟನೆಯಲ್ಲಿ, ಇಂಫಾಲ್ ಪೂರ್ವ ಜಿಲ್ಲೆಯ ಲಾಮ್ಲಿಯಾ ಪ್ರದೇಶದಲ್ಲಿ ಪೊಲೀಸ್ ಸೇನಾತಂಡ ಮತ್ತು ಅಸ್ಸಾಂ ರೈಫಲ್ ಸಿಬ್ಬಂದಿಗಳ ಸೇನಾದಳಗಳು ಮ‌ೂರು ಉಗ್ರಗಾಮಿಗಳನ್ನು ಕೊಂದು ಹಾಕಿವೆ ಎಂದು ಮ‌ೂಲಗಳು ತಿಳಿಸಿವೆ.

ಮತ್ತೊಂದು ಮುಖಾಮುಖಿಯಲ್ಲಿ ಭದ್ರತಾದಳವು ಇಂಫಾಲ್ ಪೂರ್ವ ಜಿಲ್ಲೆಯ ಲೈಮಾಪನ್ ಪ್ರದೇಶದಲ್ಲಿ ಬೆಳಿಗ್ಗೆ ಎರಡು ಉಗ್ರಗಾಮಿಗಳನ್ನು ಕೊಂದಿದ್ದಾರೆ.

ಮಯಂಗ್ ಇಂಫಾಲ್ ಮತ್ತು ಲಾಮಿಯಾ ಪ್ರದೇಶಗಳಲ್ಲಿ ಅನುಕ್ರಮವಾಗಿ 9ಎಂಎಂ ಪಿಸ್ತೂಲು ಮತ್ತು ಎಂ-16 ಬಂದೂಕುಗಳನ್ನು ಪತ್ತೆಯಾಗಿವೆ ಎಂದು ಮ‌ೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ
ರಾಹುಲ್‌‌ರಾಜ್ ಶೂಟೌಟ್‌‌ ಪ್ರಕರಣಕ್ಕೆ 'ಯು ಟರ್ನ್'
ಪೋಟಾದಂತಹ ಕಾನೂನು ಇಲ್ಲ: ಕೇಂದ್ರ ಸ್ಪಷ್ಟನೆ
ಉಗ್ರರಿಂದ ಜೈವಿಕ, ಅಣ್ವಸ್ತ್ರಗಳ ಬಳಕೆ: ಸರ್ಕಾರದ ಭೀತಿ
ಜೆಕೆ: ಪೊಲೀಸರ ಗುಂಡಿಗೆ ಯುವಕರಿಬ್ಬರ ಬಲಿ