ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತವರಿಗಾಗಮಿಸಿದ ಐವರು ಒತ್ತೆಯಾಳುಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತವರಿಗಾಗಮಿಸಿದ ಐವರು ಒತ್ತೆಯಾಳುಗಳು
ಅಪಹರಣಗೊಂಡು ಎರಡು ತಿಂಗಳುಗಳಿಂದ ಸೋಮಾಲಿಯಾ ಉಗ್ರರ ವಶದಲ್ಲಿದ್ದ 'ಸ್ಟಾಲ್ಟ್ ವಾಲರ್' ಹಡಗಿನ ಐವರು ಭಾರತೀಯ ಸಿಬಂದಿ ಇಂದು ಬೆಳಿಗ್ಗೆ ಮುಂಬೈಯಲ್ಲಿ ಬಂದಿಳಿದಿದ್ದಾರೆ.

ಮಸ್ಕತ್‌ನಿಂದ ಇಂದು ಬೆಳಿಗ್ಗೆ ಐದು ಗಂಟೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮ‌ೂಲಕ ಆಗಮಿಸಿದ ಹಡಗಿನ ಸಿಬಂದಿಗಳನ್ನು ಅವರ ಸಂಬಂಧಿಕರು ಸ್ವಾಗತಿಸಿದರು.

"ಮರಳಿ ಬಂದಿರುವುದಕ್ಕೆ ಸಂತೋಷವಾಗುತ್ತಿದೆ. ಅದನ್ನು ಶಬ್ದಗಳಿಂದ ವರ್ಣಿಸಲಾಗದು" ಎಂದು ಅಪಹರಣಕ್ಕೊಳಗಾಗಿ ಬಿಡುಗಡೆಯಾಗಿ ಬಂದ ಹಡಗಿನ ಓರ್ವ ಸಿಬಂದಿ ಪ್ರತಿಕ್ರಿಯಿಸಿದ್ದಾರೆ.

ಸೆಪ್ಟೆಂಬರ್ ಅಂತ್ಯದಲ್ಲಿ ಸೋಮಾಲಿಯಾ ಸಮುದ್ರ ಪ್ರದೇಶದಿಂದ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಹಡಗಿನಲ್ಲಿ 18 ಮಂದಿ ಭಾರತೀಯ ಸಿಬಂದಿ ಒತ್ತೆಯಾಳುಗಳಾಗಿದ್ದರು. ಸುಮಾರು 23,818 ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಕಾರ್ಗೋ ಶಿಪ್ ಸಾಗಿಸುತ್ತಿತ್ತು. ಸೋಮಾಲಿಯಾ ಉಗ್ರರು ಮತ್ತು ಹಡಗಿನ ಮಾಲಿಕರ ನಡುವೆ ನಡೆದ ಹಲವು ಸುತ್ತಿನ ಮಾತುಕತೆ ಬಳಿಕ ನವೆಂಬರ್ 16ರಂದು ಹಡಗು ಮತ್ತು ಸಿಬಂದಿಗಳನ್ನು ಕಡಲ್ಗಳ್ಳರು ಬಿಡುಗಡೆಗೊಳಿಸಿದ್ದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಭಿನವ್ ಭಾರತ ಸಂಘಟನೆಗೆ ಹಣ ನೀಡಿಲ್ಲ: ತೊಗಾಡಿಯಾ
ಸರಣಿ ಸ್ಫೋಟ ಆರೋಪಿಗಳ ಮೇಲೆ 'ಮೋಕಾ' ಏಕಿಲ್ಲ: ಬಿಜೆಪಿ
ನಕ್ಸಲ್ ಪಿಡುಗು: ಪ್ರಧಾನಿ, ಗೃಹಸಚಿವರ ಭಿನ್ನ ಹೇಳಿಕೆಗಳು
ಆಫ್ಘನ್ ಎಫೆಕ್ಟ್: ಭಾರತದ ಮೇಲೆ ಖಾಯಿದಾ ಕರಿನೆರಳು
ಮಣಿಪುರ್:ಸೇನಾಪಡೆಗಳಿಂದ ಉಗ್ರರ ಹತ್ಯೆ
ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ