ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರೈಲ್ವೇ ಇಲಾಖೆ ಲಾಲೂ 'ಕಪಿ ಮುಷ್ಠಿ'ಯಲ್ಲಿ: ಶಿವಸೇನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ಇಲಾಖೆ ಲಾಲೂ 'ಕಪಿ ಮುಷ್ಠಿ'ಯಲ್ಲಿ: ಶಿವಸೇನೆ
ಮರಾಠಿಗರಿಗೆ ರೈಲ್ವೇ ಇಲಾಖೆಯ ಉದ್ಯೋಗಗಳು ದೊರೆಯದಿರುವುದಕ್ಕೆ ರೈಲ್ವೇ ಇಲಾಖೆಯು ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ 'ಕಪಿ ಮುಷ್ಠಿ'ಯಲ್ಲಿರುವುದೇ ಕಾರಣ ಎಂದು ಶಿವಸೇನೆ ಆರೋಪಿಸಿದೆ.

"ನಾನು ಮಹಾರಾಷ್ಟ್ರಕ್ಕೆ ಸೇರಿದವನು ಮತ್ತು ಮಹಾರಾಷ್ಟ್ರ ನನಗೆ ಸೇರಿದ್ದು ಎಂದು ಲಾಲೂ ಹೇಳುತ್ತಾರೆ. ಅವರ ಧೋರಣೆ - ನಾನು ನನ್ನದು ಅಂತ ಯಾವುದಿದೆಯೋ ಅವೆಲ್ಲವೂ ನನ್ನದೇ ಮತ್ತು ಇತರರಿಗೆ ಏನೇ ಸೇರಿದ್ದರೂ ಅದು ಕೂಡ ನನ್ನದೇ" ಎಂದು ಶಿವಸೇನಾ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಲಾಲೂ ಪ್ರಸಾದ್ ಯಾದವ್‌ರನ್ನು ಹೀಗಳೆಯಲಾಗಿದೆ.

"ಶಿವಸೇನೆ ತನ್ನ ಕರ್ತವ್ಯ ಮಾಡದಿದ್ದರೂ ಮರಾಠಿಗರು ತಮ್ಮ ಬುದ್ಧಿವಂತಿಕೆ ಮತ್ತು ಶಕ್ತಿಯಿಂದ ಎಲ್ಲವನ್ನೂ ಪಡೆದುಕೊಳ್ಳಲಿದ್ದಾರೆ" ಎಂದೂ ಅದರಲ್ಲಿ ಹೇಳಲಾಗಿದೆ.

"ಇದರ ಮಧ್ಯೆ ಲಾಲೂ ರಾಷ್ಟ್ರೀಯ ಬದ್ಧತೆ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಅವರು ಮಹಾರಾಷ್ಟ್ರಕ್ಕೆ ಸೇರಿದವರು, ಮಹಾರಾಷ್ಟ್ರ ಅವರಿಗೆ ಸೇರಿದೆ ಎಂದು ಅವರು ಇತ್ತೀಚೆಗಷ್ಟೇ ಹೇಳಿದ್ದರು. ಅದನ್ನು ನಿಜವಾಗಿಸಲು ಈಗ ಅವಕಾಶ ಬಂದಿದೆ. ಶಿವಸೇನೆಯಿಂದ ಪ್ರೋತ್ಸಾಹಿಸಲ್ಪಡುವ 'ಶಿವ ವಡಾ ಪಾವ್' ಸ್ಟಾಲುಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ನಡೆಸಲು ಲಾಲೂ ಅನುಮತಿ ಕೊಡಲಿ" ಎಂಬ ಬೇಡಿಕೆಯನ್ನೂ ಶಿವಸೇನೆ ಲಾಲೂ ಮುಂದಿಟ್ಟಿದೆ.

"ಲಾಲೂರವರು ರೈಲ್ವೇ ನಿಲ್ದಾಣದಲ್ಲಿ ಈ ಸ್ಟಾಲುಗಳಿಗೆ ಒಂದು ಟೇಬಲ್ ಇಡುವಷ್ಟು ಜಾಗ ಕೊಟ್ಟರೆ ಸಾಕು. ಆದರೆ ಅದು ಮರಾಠಿ ಯುವಕರಿಗೆ ಮಾತ್ರವಾಗಿರಬೇಕು. ಇದರಿಂದ ಸುಮಾರು 5000 ಯುವಕರಿಗೆ ಉದ್ಯೋಗ ಲಭಿಸಿದಂತಾಗುತ್ತದೆ" ಎಂದು ಸಾಮ್ನಾದಲ್ಲಿ ಸಚಿವ ಲಾಲೂರನ್ನುದ್ದೇಶಿಸಿ ಬರೆಯಲಾಗಿದೆ.

"ಮಹಾರಾಷ್ಟ್ರದಲ್ಲಿ ವಡಾ, ಗುಜರಾತಿನಲ್ಲಿ ಡೋಕ್ಲಾ ಹಾಗೂ ದಕ್ಷಿಣ ಭಾರತದಲ್ಲಿ ಇಡ್ಲಿ-ಸಾಂಬಾರ್‌ ಸ್ಟಾಲುಗಳನ್ನಿಡಲು ಅಲ್ಲಿನ ಸ್ಥಳೀಯರಿಗೆ ಮಾತ್ರ ಅವಕಾಶ ಕೊಡಿ. ಲಾಲೂರವರಿಗೆ ನಮ್ಮ ವಡಾ ಪಾವ್ ತಿನಿಸಿನ ರುಚಿ ಸವಿಯಬೇಕೆನಿಸಿದರೆ 'ಶಿವ ವಡಾ ಪಾವ್' ಸಮ್ಮೇಳನಕ್ಕೆ ಬನ್ನಿ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆ ಆಯೋಜಿಸುತ್ತಿರುವ ಈ ಸಮ್ಮೇಳನಕ್ಕೆ ನಿಮಗೆ ಸ್ವಾಗತವಿದೆ" ಎಂದೂ ಸೇನೆಯ ಸಂಪಾದಕೀಯ ಸಚಿವರಿಗೆ ಮುಕ್ತ ಆಹ್ವಾನ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಹಿಂದೂ ಉಗ್ರವಾದ' ವೈಭವೀಕರಣ: ಕಾಂಗ್ರೆಸಿಗೆ ಆಡ್ವಾಣಿ ತರಾಟೆ
ತವರಿಗಾಗಮಿಸಿದ ಐವರು ಒತ್ತೆಯಾಳುಗಳು
ಅಭಿನವ್ ಭಾರತ ಸಂಘಟನೆಗೆ ಹಣ ನೀಡಿಲ್ಲ: ತೊಗಾಡಿಯಾ
ಸರಣಿ ಸ್ಫೋಟ ಆರೋಪಿಗಳ ಮೇಲೆ 'ಮೋಕಾ' ಏಕಿಲ್ಲ: ಬಿಜೆಪಿ
ನಕ್ಸಲ್ ಪಿಡುಗು: ಪ್ರಧಾನಿ, ಗೃಹಸಚಿವರ ಭಿನ್ನ ಹೇಳಿಕೆಗಳು
ಆಫ್ಘನ್ ಎಫೆಕ್ಟ್: ಭಾರತದ ಮೇಲೆ ಖಾಯಿದಾ ಕರಿನೆರಳು