ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶ್ರೀರಾಮ ನಿರ್ಮಿತ ಬಾವಿ ನಿರ್ಲಕ್ಷ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀರಾಮ ನಿರ್ಮಿತ ಬಾವಿ ನಿರ್ಲಕ್ಷ್ಯ
WD
ಸಮುದ್ರ ಮಧ್ಯದಲ್ಲಿ ಶ್ರೀರಾಮ ನಿರ್ಮಿಸಿದ್ದನೆಂದು ಹೇಳಲಾಗುವ ಸಿಹಿನೀರಿನ ಬಾವಿಯೊಂದು ನಿರ್ಲಕ್ಷ್ಯಕ್ಕೊಳಗಾಗಿದೆ. ಆದರೂ ಈ 'ಅದ್ಭುತ ಬಾವಿ'ಯ ದರ್ಶನಕ್ಕೆಂದು ಬರುತ್ತಿರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.

"ಇಲ್ಲಿಗೆ ಭೇಟಿ ಕೊಡುವ ನೂರಾರು ಯಾತ್ರಿಗಳು ಸಾಂಪ್ರದಾಯಿಕವಾಗಿ ಸಿಹಿನೀರಿನ ಬಾವಿಯಲ್ಲಿ ಮಿಂದು, ನೀರನ್ನು ತೀರ್ಥ ರೂಪದಲ್ಲಿ ಸೇವಿಸುತ್ತಾರೆ" ಎಂದು ಮಾರ್ಗದರ್ಶಕರ ಸಂಘ ಹೇಳಿದೆ.

ಈ ಬಾವಿಯನ್ನು ಶ್ರೀರಾಮನು ಬಾಣದಿಂದ ನಿರ್ಮಿಸಿದ್ದ ಎಂಬ ಪ್ರತೀತಿ ಇದೆ. ಅದಕ್ಕಾಗಿಯೇ ಇದನ್ನು 'ವಿಲ್ಲೊಂದ್ರಿ ತೀರ್ಥಂ' ಎನ್ನಲಾಗುತ್ತದೆ. ಸಮುದ್ರ ಮಧ್ಯೆಯಿರುವ ಬಾವಿಯನ್ನು ಸಂಪರ್ಕಿಸಲು ಸೇತುವೆ ಕೂಡ ಇದ್ದು, ಇಲ್ಲಿ ಪರಿಶುದ್ಧವಾದ ಸಿಹಿನೀರು ಲಭ್ಯ ಎಂದು ಎಂದು ಮಾರ್ಗದರ್ಶಕರ ಸಂಘದ ಸದಸ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಶ್ರೀರಾಮ ಬಾಣ ಬಿಟ್ಟು ನಿರ್ಮಿಸಿದ್ದ ಸಿಹಿನೀರಿನ ಬುಗ್ಗೆಯನ್ನು ಬಾವಿಯಾಗಿ ಪರಿವರ್ತಿಸಿದ್ದು ಪಾಂಡ್ಯ ರಾಜರು ಎಂದು ಹೇಳಲಾಗುತ್ತದೆ. ಇದೀಗ ಆ ಸಿಹಿನೀರಿನ ಬಾವಿ ಮತ್ತು ಸೇತುವೆ ಶಿಥಿಲಗೊಂಡಿದ್ದು, ದುರಸ್ತಿಯ ಅಗತ್ಯವಿದೆ. ಈ ಬಗ್ಗೆ ರಾಮೇಶ್ವರಮ್ ದೇವಸ್ಥಾನ ಮಂಡಳಿ ಮತ್ತು ನಗರಪಾಲಿಕೆ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು. ಆದರೆ ಅವರೆಲ್ಲರೂ ಈ ಪವಿತ್ರ ಸ್ಥಳವನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂಘ ದೂರಿದೆ.

ಹಿಂದೂ ಪುರಾಣ ಪ್ರಕಾರ ಶ್ರೀರಾಮನು ರಾವಣನನ್ನು ಮಣಿಸಿ ಲಂಕೆಯಿಂದ ಅಯೋಧ್ಯೆಗೆ ಬರುವ ಮಾರ್ಗದಲ್ಲಿ ಪತ್ನಿ ಸೀತೆಯ ಬಾಯಾರಿಕೆ ನೀಗಿಸಲು ಬಾಣ ಬಿಟ್ಟು ರಂಧ್ರ ನಿರ್ಮಿಸಿ ನೀರಿನ ಬುಗ್ಗೆ ಸೃಷ್ಟಿಸಿದ್ದ ಎಂಬುದು ಪ್ರತೀತಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸ್ಟಾಲ್ಟ್ ವೇಲರ್' ಕಾಪ್ಟನ್, ಇತರ ಸಿಬ್ಬಂದಿ ತವರಿಗೆ
ಅಶ್ಲೀಲ ಸಿಡಿ ತೋರಿಸಿದ ಎಟಿಎಸ್: ಸಾಧ್ವಿ ಆರೋಪ
ತೊಗಾಡಿಯಾ ಆರ್ಥಿಕ ಸಹಾಯ ನೀಡಿಲ್ಲ: ಸಿಬಿಐ
'ಹಿಂದೂ ಉಗ್ರರ ರಾಷ್ಟ್ರ' ವನ್ನಾಗಿಸಲು ಕಾಂಗ್ರೆಸ್ ಯತ್ನ: ಬಿಜೆಪಿ
ರೈಲ್ವೇ ಇಲಾಖೆ ಲಾಲೂ 'ಕಪಿ ಮುಷ್ಠಿ'ಯಲ್ಲಿ: ಶಿವಸೇನೆ
'ಹಿಂದೂ ಉಗ್ರವಾದ' ವೈಭವೀಕರಣ: ಕಾಂಗ್ರೆಸಿಗೆ ಆಡ್ವಾಣಿ ತರಾಟೆ