ಅಚ್ಚರಿಯ ಬೆಳವಣಿಗೆಯೊಂದರಲ್ಲಿ ದೆಹಲಿ ಹೈಕೋರ್ಟ್ ಯಮುನಾ ನದಿಯ ಮಾಲಿನ್ಯಕ್ಕಾಗಿ ದೆಹಲಿ ಜಲಮಂಡಳಿಯ ಮಾಜಿ ಮುಖ್ಯಕಾರ್ಯ ನಿರ್ವಾಹಕ ಅರುಣ್ ಮಾಥೂರ್ ಹಾಗೂ ಇತರ ಇಬ್ಬರು ಉನ್ನತ ಅಧಿಕಾರಿಗಳಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಿದೆ.
ಯುಮುನಾ ನದಿಗೆ ಕೊಳಚೆ ನೀರು ಹರಿಯುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ಎರಡು ವರ್ಷಗಳ ಹಿಂದೆ ಭರವಸೆ ನೀಡಿದ್ದರೂ, ಯಮುನಾ ನದಿ ಕಲುಷಿತಗೊಳ್ಳುತ್ತಿರುವುದನ್ನು ತಡೆಯಲು ಯುವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ಕ್ರಮಕ್ಕೆ ಮುಂದಾಗಿದೆ.
ಆದರೆ ಜೈಲು ಆದೇಶವನ್ನು ಮೂರು ತಿಂಗಳ ಕಾಲ ತಡೆಹಿಡಿಯಲಾಗಿದೆ. ಇದು ಕೊಳಚೆ ನೀರು ಯಮುನಾ ನದಿಗೆ ಹರಿಯದಂತೆ ತಡೆಯಲು ಕ್ರಮ ಕೈಗೊಳ್ಳಲು ನೀಡಿರುವ ಕಾಲಾವಕಾಶವಾಗಿದೆ. |