ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈಯಲ್ಲಿ ಮತ್ತೆ ಉಗ್ರರ ಹೇಷಾರವ: 100 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈಯಲ್ಲಿ ಮತ್ತೆ ಉಗ್ರರ ಹೇಷಾರವ: 100 ಸಾವು
ಗುಂಡಿನ ಕಾದಾಟದಲ್ಲಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವು
ಮುಂಬೈ: ಮುಂಬೈಯಲ್ಲಿ ಬುಧವಾರ ತಡರಾತ್ರಿ ನಡೆದಿರುವ ಸರಣಿ ಬಾಂಬ್ ಸ್ಫೋಟ ಮತ್ತು ಗುಂಡಿನ ಹಾರಾಟದಲ್ಲಿ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳು, ಓರ್ವ ವಿದೇಶಿ ಪ್ರವಾಸಿ ಸೇರಿದಂತೆ ಕನಿಷ್ಠ 100 ಮಂದಿ ಹತರಾಗಿದ್ದು, 250ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.

ನಗರದ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ಸ್ಥಳವಾಗಿರುವ ಗೇಟ್‌ವೇ ಆಫ್ ಇಂಡಿಯಾ ಸಮೀಪದ ಎರಡು ಫೈವ್ ಸ್ಟಾರ್ ಹೋಟೇಲುಗಳಾದ ತಾಜ್ ಇಂಟರ್‌ಕಾಂಟಿನೆಂಟಲ್ ಮತ್ತು ಟ್ರೈಡೆಂಟ್(ಹಿಂದಿನ ಒಬೆರಾಯ್) ಹೋಟೆಲ್‌ಗಳಿಗೆ ದಾಳಿ ನಡೆಸಿರುವ ಉಗ್ರರು ಅಲ್ಲಿ ಪ್ರವಾಸಿಗಳನ್ನು ಒತ್ತೆಯಾಳುಗಳಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ.

ಈ ಸರ್ತಿಯ ದಾಳಿಗೆ ಉಗ್ರರು ಎಕೆ 47 ರೈಫಲ್‌ಗಳು, ಪ್ರಬಲ ಶಕ್ತಿಯ ಕೈ ಬಾಂಬ್ ಮತ್ತು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿದ್ದಾರೆ.

ಹೇಮಂತ್ ಕರ್ಕರೆ ಸಾವು
ಉಗ್ರರೊಂದಿಗೆ ನಡೆಸಿರುವ ಕಾದಾಟದಲ್ಲಿ ಮುಂಬೈ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಸೇರಿದಂತೆ ಹತ್ತು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ನಗರದ ಅತ್ಯಂತ ಜನನಿಬಿಡ ರೈಲ್ವೇ ನಿಲ್ದಾಣವಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್ ಉಗ್ರರ ಗುರಿಗಳಲ್ಲಿ ಒಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಕೀಯ ಪಕ್ಷಗಳ ರೋಡ್ ಶೋಗೆ ಆಂಧ್ರ ಹೈಕೋರ್ಟ್ ತಡೆ
ಬೆಲೆ ಇಳಿಕೆ ಹೇಳಿಕೆ: ದೇವ್ರಾಗೆ ನೋಟಿಸ್ ಜಾರಿ
ಎಟಿಎಸ್ ವರಿಷ್ಠರ ಮನೆಗೆ ಸ್ಫೋಟ ಬೆದರಿಕೆ
ಭಯೋತ್ಪಾದನೆ ಹೆಸರಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ:ಸೋನಿಯಾ
ದೆಹಲಿ ಜಲಮಂಡಳಿ ಮಾಜಿ ಸಿಇಓಗೆ ಜೈಲು
ಎಟಿಎಸ್ ಕಾನೂನಿನಂತೆ ಕಾರ್ಯಕೈಗೊಳ್ಳುತ್ತಿದೆ: ವಿಲಾಸ್