ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಾಜ್, ಒಬೆರಾಯ್‌ಗೆ ನುಗ್ಗಿದ ಕಮಾಂಡೋಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್, ಒಬೆರಾಯ್‌ಗೆ ನುಗ್ಗಿದ ಕಮಾಂಡೋಗಳು
ರಾಷ್ಟ್ರೀಯ ಭದ್ರತಾ ಪಡೆಗಳ ಕಮಾಂಡೋಗಳು ತಾಜ್ ಇಂಟರ್‌ಕಾಂಟಿನೆಂಟಲ್ ಮತ್ತು ಒಬೆರಾಯ್ ಹೋಟೇಲುಗಳಿಗೆ ಗುರವಾರ ಮುಂಜಾನೆ ಪ್ರವೇಶಿಸಿದ್ದು, ಉಗ್ರರೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿದ್ದಾರೆ.

ತಾಜ್ ಹೋಟೇಲಿನಲ್ಲಿದ್ದ ಹಲವಾರು ಅತಿಥಿಗಳನ್ನು ಕಾಪಾಡಲಾಗಿದೆ. ಇವರಲ್ಲಿ ವಿದೇಶಿ ನ್ಯೂಕ್ಲಿಯರ್ ವಿಜ್ಞಾನಿ ಹಾಗೂ ಅವರ ಪತ್ನಿಯೂ ಸೇರಿದ್ದಾರೆ. ಈ ಮಧ್ಯೆ ಹೋಟೇಲಿನ, ಗೇಟ್‌ವೇ ಪ್ರದೇಶದಲ್ಲಿದ್ದ ಎಲ್ಲ ಪತ್ರಕರ್ತರನ್ನು ಪೊಲೀಸರು ತೆರವು ಮಾಡಿದ್ದಾರೆ.

ತಾಜ್ ಹೊಟೇಲ್ ಬಳಿ ಇರುವ ಬಡೆ ಮಿಯಾನ್ ಹೋಟೇಲ್‌ನ ಹೊರಗಡೆ ಪತ್ತೆಯಾಗಿರುವ ಎಂಟು ಕೆಜಿ ಆರ್‌ಡಿಎಕ್ಸ್‌ ಅನ್ನು ನಿಷ್ಕ್ರೀಯಗೊಳಿಸಲಾಗಿದೆ. ಇದೇ ವೇಳೆಗೆ ವಿಧಾನ್ ಭವನ್ ಸಮೀಪ ಬಾಂಬ್ ಒಂದನ್ನೂ ನಿಷ್ಕ್ರೀಯಗೊಳಿಸಲಾಗಿದೆ.

ತಾಜ್ ಹೋಟೇಲಿನೊಳಗಡೆ ನಾಲ್ವರು ಸಂಸದರು ಮತ್ತು ಕನಿಷ್ಠ 100 ಪ್ರವಾಸಿಗಳು ಸಿಲುಕಿಕೊಂಡಿದ್ದಾರೆ. ಇದೀಗಾಗಲೇ ಹೋಟೇಲೊಳಗಿರುವ ಎಟಿಎಸ್ ಕಾರ್ಯಚರಣೆ ಕೈಗೊಂಡಿದೆ.

ಘಟನೆಯ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತಾಜ್ ಹೋಟೇಲ್, ಹೋಟೇಲ್‌ನಲ್ಲಿರುವ ಅತಿಥಿಗಳು ಮತ್ತು ಸಿಬ್ಬಂದಿಗಳ ರಕ್ಷಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಪೊಲೀಸರು ಮತ್ತು ಸರಕಾರಿ ಪ್ರಾಧಿಕಾರಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿಯೂ ಅದು ಹೇಳಿದೆ.

ಕನಿಷ್ಠ ಪಕ್ಷ ಆರು ವಿದೇಶಿಯರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 101ಕ್ಕೇರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಮೇಶ್ ತ್ಯಾಡೆ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಜಾಹಿದೀನ್ ಉಗ್ರರನ್ನು ಬಿಡುಗಡೆ ಮಾಡಿ: ಷರತ್ತು
ಸ್ಫೋಟಕ್ಕೆ ಕಾರಣ ತಾನೆಂದ ಡೆಕ್ಕನ್ ಮುಜಾಹಿದೀನ್
ಮುಂಬೈಯಲ್ಲಿ ಮತ್ತೆ ಉಗ್ರರ ಹೇಷಾರವ: 100 ಸಾವು
ರಾಜಕೀಯ ಪಕ್ಷಗಳ ರೋಡ್ ಶೋಗೆ ಆಂಧ್ರ ಹೈಕೋರ್ಟ್ ತಡೆ
ಬೆಲೆ ಇಳಿಕೆ ಹೇಳಿಕೆ: ದೇವ್ರಾಗೆ ನೋಟಿಸ್ ಜಾರಿ
ಎಟಿಎಸ್ ವರಿಷ್ಠರ ಮನೆಗೆ ಸ್ಫೋಟ ಬೆದರಿಕೆ