ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಬಂದೂಕುಧಾರಿ ಉಗ್ರರು ಚಿಕ್ಕ ಹುಡುಗರಂತಿದ್ದರು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಬಂದೂಕುಧಾರಿ ಉಗ್ರರು ಚಿಕ್ಕ ಹುಡುಗರಂತಿದ್ದರು'
ಮುಂಬೈ: ಭಾರತೀಯ ಗುಪ್ತಚರ ದಳಗಳು ಮತ್ತು ಭದ್ರತಾ ಪಡೆಗಳು ಉಗ್ರರನ್ನು ಗುರುತಿಸಲು ಪರದಾಡುತ್ತಿದ್ದರೂ, ಉಗ್ರರನ್ನು ಕಣ್ಣಾರೆ ಕಂಡಿರುವ ಆಸ್ಟ್ರೇಲಿಯಾ ಪ್ರಜೆಗಳು, ಉಗ್ರರು ಚಿಕ್ಕಹುಡುಗರಂತಿದ್ದರು ಎಂದು ಹೇಳಿದ್ದಾರೆ. ಡೇವಿಡ್ ಕೂಕರ್(23) ಮತ್ತು ಕಾಟೆ ಆನ್ಸ್‌ಟಿ(24) ಎಂಬಿಬ್ಬರು ಕೊಲಾಬದ ಬಾರ್ ಅಫ್ ಲಿಯೋಪೋಲ್ಡ್‌ನಲ್ಲಿ ಉಗ್ರರಿಗೆ ಮುಖಮುಖಿಯಾಗಿದ್ದರು.
WD

ರೋಷಾವೇಶಗದಿಂದ ಓಡಾಡುತ್ತಿದ್ದ ಉಗ್ರರು ಚಿಕ್ಕ ಹುಡುಗರಂತೆ ಕಾಣುತ್ತಿದ್ದರು. ಈ ಇಬ್ಬರು ತಮ್ಮ ಪದವಿಯನ್ನು ಆಚರಿಸಲು ವಾಣಿಜ್ಯ ನಗರಿಗೆ ಆಗಮಿಸಿದ್ದು, ಲಿಯೋಪೋಲ್ಡ್‌ಗೆ ಊಟಕ್ಕಾಗಿ ತೆರಳಿದ್ದರು. ಆ ವೇಳೆಗೆ ದಾಳಿ ನಡೆದಿತ್ತು.

"ನಾವು ಊಟಕ್ಕಾಗಿ ಕುಳಿತಿದ್ದೆವಷ್ಟೆ. ಊಟಕ್ಕೆ ಆರ್ಡರ್ ನೀಡುತ್ತಿದ್ದೆವು. ಅಷ್ಟರಲ್ಲಿ ನಮ್ಮು ಸುತ್ತ ಪಟಾಕಿ ಸಿಡಿದಂತಾಯಿತು. ಮತ್ತು ಜನತೆ ಕಿರುಚಾಡುತ್ತಿದ್ದರು" ಎಂಬುದಾಗಿ ಅವರು ಸಿಡ್ನಿಯ ಕೊರಿಯರ್ ಮೇಲ್ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಕಾಟೆಯ ಕಾಲಿಗೆ ಗುಂಡೇಟು ತಗಲಿದರೆ, ಡೇವಿಡ್ ಕಣ್ಣೆದುರು ಗುಂಡು ಹಾದಿದೆ. ಗೆಳತಿ ಕಾಟೆ ನಡೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಆಕೆಯನ್ನು ಡೇವಿಡ್ ಅಕ್ಷರಶಃ ಎತ್ತಿಕೊಂಡು ಹೋಗಬೇಕಾಯಿತು.

ಬಳಿಕ ಟ್ಯಾಕ್ಸಿಯೊಂದರಲ್ಲಿ ಬಾಂಬೆ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ತಾವೇ ಪ್ರಥಮರು ಎಂದಿರುವ ಈ ಜೋಡಿ, ಇದೀಗ ಆಸ್ಪತ್ರೆಯಲ್ಲಿ ಇರುವುದಾಗಿ ಹೇಳಿದೆ.

ಇನ್ನೋರ್ವ ಆಸ್ಟ್ರೇಲಿಯಾದ ಪ್ರಜೆ ಟಿವಿ ನಟಿ ಬ್ರೂಕ್ ಸಾಚ್‌ವೆಲ್, ತಾಜ್ ಹೋಟೇಲ್‌ನಲ್ಲಿ ಇನ್ನೊಂದು ಉಗ್ರರ ತಂಡದ ಜತೆ ಮುಖಾಮುಖಿಯಾಗಿದ್ದಾರೆ. ಅವರು 2x3 ಅಳತೆಯ ಕಪಾಟಿನಲ್ಲಿ ಒಂದು ಗಂಟೆಕಾಲ ಅಡಗಿ ಕುಳಿತಿದ್ದರಂತೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ಭೇಟಿ ರದ್ದು ಪಡಿಸಿದ ಆಡ್ವಾಣಿ
ತಾಜ್, ಒಬೆರಾಯ್‌ಗೆ ನುಗ್ಗಿದ ಕಮಾಂಡೋಗಳು
ಮುಜಾಹಿದೀನ್ ಉಗ್ರರನ್ನು ಬಿಡುಗಡೆ ಮಾಡಿ: ಷರತ್ತು
ಸ್ಫೋಟಕ್ಕೆ ಕಾರಣ ತಾನೆಂದ ಡೆಕ್ಕನ್ ಮುಜಾಹಿದೀನ್
ಮುಂಬೈಯಲ್ಲಿ ಮತ್ತೆ ಉಗ್ರರ ಹೇಷಾರವ: 100 ಸಾವು
ರಾಜಕೀಯ ಪಕ್ಷಗಳ ರೋಡ್ ಶೋಗೆ ಆಂಧ್ರ ಹೈಕೋರ್ಟ್ ತಡೆ