ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸೇತರ ಮೈತ್ರಿ ಸರಕಾರ ರೂಪಿಸಿದ್ದ ಮಾಜಿ ಪ್ರಧಾನಿ ವಿ.ಪಿ.ಸಿಂಗ್, ಗುರವಾರ ಅಪರಾಹ್ನ 2.45ರ ವೇಳೆಗೆ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಸುದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ವಿ.ಪಿ.ಸಿಂಗ್ ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದವರು. 1989ರ ಚುನಾವಣೆಯಲ್ಲಿ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸನ್ನು ಬದಿಗೆ ಸರಿಸಿ ಪ್ರಧಾನಿ ಪಟ್ಟಕ್ಕೇರಿದ್ದರು. ಬಳಿಕ ಮಂಡಲ್ ಆಯೋಗದ ಜಾರಿಗೆ ಹೊರಟು ತನ್ನ ಸ್ಥಾನ ಕಳೆದುಕೊಳ್ಳಬೇಕಾಗಿತ್ತು.ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು 1991ರಿಂದ ಚಿಕಿತ್ಸೆಯಲ್ಲಿದ್ದರು. 'ಮಂಡರ ರಾಜ' ಎಂದು ಕರೆಸಿಕೊಳ್ಳುತ್ತಿದ್ದ ಸಿಂಗ್ ಅವರಿಗೆ ಮರಣಕಾಲಕ್ಕೆ 77 ವರ್ಷ ವಯಸ್ಸಾಗಿತ್ತು.ಸಿಂಗ್ ಅವರು ಪತ್ನಿ ಸೀತಾ ಕುಮಾರಿ ಪುತ್ರರಾದ ಅಜೆಯ್ ಸಿಂಗ್, ಅಭಯ್ ಸಿಂಗ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. |