ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಭಾರತದ ವಾಣಿಜ್ಯ ನಗರದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹೋರಾಟದ ಸಂದರ್ಭ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಯ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿಗಳನ್ನು ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಮುಂಬೈಗೆ ಆಗಮಿಸಿದ ಅವರು ಈ ಘೋಷಣೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಹತರಾದ ಭದ್ರತಾ ಪಡೆಯ ಯೋಧರಿಗೆ ತಮ್ಮ ಅಂತಿಮ ನಮನ ಸಲ್ಲಿಸಲು ಅವರು ಇಲ್ಲಿಗೆ ಆಗಮಿಸಿದ್ದರು.

ಭಯೋತ್ಪಾದಕರೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಧೈರ್ಯವಂತ ದೇಶಭಕ್ತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಭದ್ರತಾ ಪಡೆಯ ಯೋಧರಿಗೆ ನನ್ನ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಮೃತ ಕುಟುಂಬ ವರ್ಗಕ್ಕೆ ಗುಜರಾತ್ ಸರಕಾರದ ವತಿಯಿಂದ 10ಮಿಲಿಯನ್ ರೂಪಾಯಿಗಳ ಪರಿಹಾರವನ್ನು ನೀಡಲಿದೆ ಎಂದು ಮೋದಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
ದಾಳಿಗೆ ಗುಜರಾತ್ ಮೀನುಗಾರರ ಬೋಟ್ ಬಳಕೆ ?
ಉಗ್ರರ ನಿಗ್ರಹಕ್ಕೆ ಕಠಿಣ ಕ್ರಮ: ಪ್ರಧಾನಿ
ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ
ಸಾವಿನ ಸಂಖ್ಯೆ 130ಕ್ಕೆ; ಮುಂದುವರಿದ ಕಾರ್ಯಾಚರಣೆ
ಸರ್ಕಾರದಿಂದ ಸಮಿತಿ ನೇಮಕ: ಸಂಪುಟ ನಿರ್ಧಾರ