ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ಐಷಾರಾಮಿ ಹೊಟೇಲ್ ತಾಜ್ ಮಹಲಿನಲ್ಲಿ ಕಳೆದ ಹತ್ತು ತಿಂಗಳಿನಿಂದ ಶಿಕ್ಷಾರ್ಥಿ ಬಾಣಸಿಗನಾಗಿ ಉಗ್ರಗಾಮಿಯೊಬ್ಬ ಕೆಲಸ ಮಾಡುತ್ತಿದ್ದ ಎಂಬ ಆಘಾತಕಾರಿ ವರದಿಯೊಂದು ಶುಕ್ರವಾರ ರಾತ್ರಿ ಬಹಿರಂಗಗೊಂಡಿದೆ.

ಸಾವಿಗೀಡಾಗಿರುವ ತರಬೇತು ನಿರತ ಬಾಣಸಿಗ, ತಾನು ಸಾಯುವ ಮುನ್ನ ತನ್ನ ಮನೆಗೆ ಕರೆ ನೀಡಿ ತನ್ನ ಸ್ನೇಹಿತರು ತನ್ನಮೇಲೆ ಗುಂಡೆಸೆದರು ಎಂದು ಹೇಳಿದ್ದ ಬಳಿಕ ಈ ವಿಚಾರ ಹೊರಬಿದ್ದಿದೆ.

ಈ ಹೇಳಿಕೆಯಿಂದಾಗಿ, ಶಂಕಿಸಿದ್ದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕರು ಹೋಟೇಲಿನಲ್ಲಿ ಅಡಗಿದ್ದರು ಎಂಬ ಅಂಶವ್ಯಕ್ತವಾಗಿದೆ. ಅಲ್ಲದೆ, ಭಯೋತ್ಪಾದಕರು ವರ್ಷದಿಂದಲೇ ಈ ಯೋಜನೆಯನ್ನು ಹಮ್ಮಿಕೊಂಡಿದ್ದು, ಸಾಕಷ್ಟು ಪೂರ್ವತಯ್ಯಾರಿಗಳನ್ನು ನಡೆಸಿ, ಸಾಮಾಗ್ರಿಗಳನ್ನು ಸಂಗ್ರಹಿಸಿಯೇ ಈ ಕೃತ್ಯಕ್ಕೆ ಇಳಿದಿದ್ದಾರೆ ಎಂಬುದೂ ಸ್ಪಷ್ಟವಾಗಿದೆ.

ಹೊಟೇಲಿನಲ್ಲಿ ದಾಳಿ ನಡೆಸುವ ಮೊದಲೇ ಆಯುಧ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿರಬಹುದು. ಇಷ್ಟೊಂದು ದೀರ್ಘಕಾಲದ ಹೋರಾಟಕ್ಕೆ ಭಾರೀ ಶಸ್ತ್ರಾಸ್ತ್ರಗಳ ಅಗತ್ಯವಿರುವುದರಿಂದ ಆ ಸಂಶಯಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಆ ಉಗ್ರ ಬಾಣಸಿಗನೇ ಹೊಟೇಲಿನ ದಾಳಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಹಾಗೂ ಹೊಟೇಲಿನ ನಕಾಶೆಯನ್ನು ನೀಡಿರಬಹುದು ಎಂಬ ಶಂಕೆಯೂ ಇದೆ.

ಉಗ್ರರು ವ್ಯವಸ್ಥಿತವಾಗಿ ಕಾರ್ಯ ನಿರ್ವವಿಹಿಸಿದ್ದು, ಅದಕ್ಕಾಗಿ ಹೊಟೇಲಿನ ಒಳಗೆ ನಿಯಂತ್ರಣ ಕೊಠಡಿ ನಿರ್ಮಿಸಿದ್ದರು ಎಂದು ಹೆಸರು ಹೇಳಲಿಚ್ಚಿಸದ ಸಚಿವರೊಬ್ಬರು ಅಂದಾಜಿಸಿದ್ದಾರೆ.

ಉಗ್ರ ಬಾಣಸಿಗನ ಬಗ್ಗೆ ಬಂದಿರುವ ಆಘಾತಕಾರಿ ಮಾಹಿತಿಯಿಂದ ಮತ್ತಷ್ಟು ಸಂಶಯಗಳಿಗೆ ಎಡೆಯಾಗುತ್ತಿದ್ದು, ಇನ್ನಷ್ಟು ಬಾಣಸಿಗರು ಇಂತಹ ಬೇರೆ ಬೇರೆ ಹೊಟೇಲುಗಳಲ್ಲಿರಬಹುದು ಮತ್ತು ದಾಳಿಗೆ ಸಿದ್ಧತೆ ನಡೆಸುತ್ತಿರಬಹುದು ಎಂಬ ಭಯವೂ ಕಾಡುತ್ತಿದೆ. ಇದು ಭದ್ರತಾ ಅಧಿಕಾರಿಗಳಿಗೆ ಇನ್ನಷ್ಟು ಒತ್ತಡವನ್ನು ಸೃಷ್ಟಿಸಿದ್ದು, ಪರಿಸ್ಥಿತಿ ನಿಭಾಯಿಸುವುದು ಸವಾಲೆನಿಸಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
ದಾಳಿಗೆ ಗುಜರಾತ್ ಮೀನುಗಾರರ ಬೋಟ್ ಬಳಕೆ ?
ಉಗ್ರರ ನಿಗ್ರಹಕ್ಕೆ ಕಠಿಣ ಕ್ರಮ: ಪ್ರಧಾನಿ
ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ