ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ
ನವದೆಹಲಿ: ಉಗ್ರರೊಂದಿಗೆ ವಿರೋಚಿತ ಕಾದಾಟ ನಡೆಸುವ ವೇಳೆ ಪ್ರಾಣ ತೆತ್ತಿರುವ ರಾಷ್ಟ್ರದ ಹೆಮ್ಮೆಯ ಯೋಧರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮತ್ತು ಎನ್ಎಸ್‌ಜಿ ಹವಲ್ದಾರ್ ಗಜೇಂದ್ರ ಸಿಂಗ್ ಅವರುಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

ಹೇಮಂತ್ ಕರ್ಕರೆ
ಉಗ್ರರ ಗುಂಡಿಗೆ ಮೊದಲ ಬಲಿಯಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಮೃತದೇಹವನ್ನು ಅಂತ್ಯಕ್ರಿಯೆಗೆ ಮುಂಚಿತವಾಗಿ ಅವರ ನಿವಾಸಕ್ಕೆ ತರಲಾಯಿತು. ವಿದೇಶದಲ್ಲಿರುವ ಅವರ ಇಬ್ಪರು ಪುತ್ರಿಯರು ತಮ್ಮ ತಂದೆಗೆ ಅಂತಿಮ ನಮನ ಸಲ್ಲಿಸಲು ಆಗಮಿಸಬೇಕಿದ್ದ ಕಾರಣ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಅವರ ಪ್ರಥಮ ಪುತ್ರಿ ಜುಯಿ ಅಮೆರಿಕದಲ್ಲಿದ್ದರೆ, ದ್ವಿತೀಯ ಪುತ್ರಿ ಸಯಾಲಿ ಲಂಡನ್‌ನಲ್ಲಿದ್ದರು. ಪುತ್ರ ಆಕಾಶ್ ಮುಂಬೈಯಲ್ಲಿದ್ದಾರೆ.

ಉಗ್ರರೊಂದಿಗೆ ಕಾದಾಟದ ವೇಳೆಗೆ ಕೊಂಚ ವಿಶ್ರಾಂತಿಗಾಗಿ ಅವರು ತಮ್ಮ ಗುಂಡು ನಿರೋಧಕ ಜಾಕೀಟನ್ನು ಹೊರತೆಗೆದ ವೇಳೆಗೆಯೇ ಉಗ್ರರು ಅವರ ಎದೆಗೆ ಗುರಿಯಿರಿಸಿದ್ದರು.

ಏಳು ವರ್ಷಗಳ ಕಾಲ ಬಾಹ್ಯ ಗುಪ್ತಚರ ಏಜೆನ್ಸಿಯಾಗಿರುವ ರಿಸರ್ಚ್ ಅನಾಲಿಸ್ ವಿಂಗ್(ರಾ)ದಲ್ಲಿ ಸೇವೆ ಸಲ್ಲಿಸಿದ್ದ ಬಳಿಕ ಕಳೆದ ಜನವರಿಯಲ್ಲಿ ಎಟಿಎಸ್ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಸೇವೆಯಲ್ಲಿರುವಾಗಲೆ ಕರ್ಕರೆ ವೀರ ಮರಣ ಕಂಡರು.

ಮೇಜರ್ ಸಂದೀಪ್ ಉನ್ನಿಕೃಷ್ಣನ್
31ರ ಹರೆಯದ ಸಂದೀಪ್ ಉನ್ನಿಕೃಷ್ಣನ್ ಅವರು ಉಗ್ರರೊಂದಿಗೆ ಕಾದಾಡುವ ವೇಳೆಗೆ ಶುಕ್ರವಾರ ಗುಂಡೇಟಿಗೆ ಬಲಿಯಾಗಿದ್ದಾರೆ.
51 ವಿಶೇಷ ಕಾರ್ಯಪಡೆಯೊಂದಿಗಿದ್ದ ಅವರು ಎನ್ಎಸ್‌‌ಜಿಗೆ ಡೆಪ್ಯುಟೇಶನ್‌ ಮೇಲೆ ಬಂದಿದ್ದರು. ಕಳೆದ ಎರಡು ವರ್ಷಗಳಿಂದ ಸಂದೀಪ್ ಅವರು ಬ್ಲಾಕ್ ಕ್ಯಾಟ್ ಕಮಾಂಡೋದಲ್ಲಿದ್ದರು. ಭಾರತೀಯ ಸೇನೆಗೆ 1999ರಲ್ಲಿ ಸೇರಿದ್ದ ಅವರು 2007ರಲ್ಲಿ ಎನ್ಎಸ್‌ಜಿಗೆ ಸೇರಿದ್ದರು. ಬೆಂಗಳೂರಿನವರಾದ ಸಂದೀಪ್ ಇವರ ತಂದೆ ಉನ್ನಿಕೃಷ್ಣನ್ ಅವರು ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವೀರಮರಣವನ್ನಪ್ಪಿರುವ ಉನ್ನಿಕೃಷ್ಣನ್‌ರಿಗೂ ರಾಷ್ಟ್ರ ಗೌರವ ಪೂರ್ಣ ಕಂಬನಿ ಮಿಡಿದಿದೆ.

ಗಜೇಂದ್ರ ಸಿಂಗ್
ನಾರಿಮನ್ ಹೌಸ್‌ನಲ್ಲಿ ಉಗ್ರರೊಂದಿಗೆ ಕಾದಾಟ ನಡೆಸಿದ ವೇಳೆಗೆ ಸಾವನ್ನಪ್ಪಿರುವ ಇನ್ನೋರ್ವ ಯೋಧ ಎನ್ಎಸ್‌ಜಿ ಹವಾಲ್ದಾರ್ ಗಜೇಂದ್ರ ಸಿಂಗ್ ಅವರ ಮೃತದೇಹದ ಅಂತ್ಯಕ್ರಿಯೆ ಡೆಹ್ರಾಡೂನ್‌ನಲ್ಲಿ ನಡೆಸಲಾಯಿತು.

ಅವರ ಹುಟ್ಟೂರು ದೆಹಲಿಯ ಡೆಹ್ರಾಡೂನ್‌ನಲ್ಲಿ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪಾಲಮ್‌ನಲ್ಲಿರುವ ಎನ್ಎಸ್‌ಜಿ ಮುಖ್ಯಕಚೇರಿಯಲ್ಲಿ ಎನ್ಎಸ್‌ಜಿಯ ಎಲ್ಲಾ ಸಿಬ್ಬಂದಿಗಳು ಸೇರಿದ್ದು ಅಗಲಿದ ಸಹೋದ್ಯೋಗಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಅವರ ದೇಹವನ್ನು ಡೆಹ್ರಾಡೂನ್‌ಗೆಗೆ ಒಯ್ಯಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
ದಾಳಿಗೆ ಗುಜರಾತ್ ಮೀನುಗಾರರ ಬೋಟ್ ಬಳಕೆ ?